ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ

Published 28 ಮೇ 2024, 16:13 IST
Last Updated 28 ಮೇ 2024, 16:13 IST
ಅಕ್ಷರ ಗಾತ್ರ

ಬೆಳಗಾವಿ: ತಮಗೆ ಕಚ್ಚಿದ ಹಾವಿನೊಂದಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಇಲ್ಲಿನ ಜಿಲ್ಲಾಸ್ಪತ್ರೆಗೆ ಸೋಮವಾರ ಆಗಮಿಸಿದ ಯುವಕನನ್ನು ಕಂಡು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಹೌಹಾರಿದರು.
ತಾಲ್ಲೂಕಿನ ಹುಂಚಾನಟ್ಟಿಯಲ್ಲಿ ತಮ್ಮ ಮನೆ ಬಳಿ ಬಂದಿದ್ದ ಹಾವು ಹಿಡಿದ ಶಾಹೀದ್‌, ಅದನ್ನು ಬೆಟ್ಟಕ್ಕೆ ಬಿಡಲು ಹೋಗಿದ್ದರು. ಆಗ ಅವರಿಗೆ ಕಚ್ಚಿತ್ತು.

ಯಾವ ಹಾವು ಕಚ್ಚಿದೆ ಎಂದು ಗೊಂದಲವಾಗದಿರಲಿ ಮತ್ತು ಚಿಕಿತ್ಸೆಗೆ ಅನುಕೂಲವಾಗಲೆಂದು ಡಬ್ಬಿಯಲ್ಲಿ ಹಾವು ಇರಿಸಿಕೊಂಡು ಆಸ್ಪತ್ರೆಗೆ ಬಂದರು. ಚಿಕಿತ್ಸೆ ಪಡೆದ ಬಳಿಕ ಮನೆಗೆ ಮರಳಿದ ಅವರು, ‘ಈ ಹಾವನ್ನು ಸುರಕ್ಷಿತವಾಗಿ ಮರಳಿ ಬಿಡುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT