ಬೆಳಗಾವಿ: ಪೂರ್ವ ಮಾಹಿತಿ ಇಲ್ಲದೆ ವಿದ್ಯುತ್ ಕಡಿತ. ಟ್ರಾನ್ಸ್ಫಾರ್ಮರ್ಗಳ ದುರಸ್ತಿ ಅಥವಾ ಬದಲಾವಣೆ ಮತ್ತು ಅಕ್ರಮ–ಸಕ್ರಮ ಯೋಜನೆ ಅನುಷ್ಠಾನದಲ್ಲಿ ವಿಳಂಬ. ವಾಲಿರುವ ಕಂಬಗಳನ್ನು ಸರಿಪಡಿಸಲು ನಿರ್ಲಕ್ಷ್ಯ. ಅವಘಡಗಳಿಗೆ ಆಹ್ವಾನ ನೀಡುವಂತಿದ್ದರೂ ಸಿಗದ ಸ್ಪಂದನೆ. ನಿರ್ವಹಣೆಗೆ ದೊರೆಯದ ಆದ್ಯತೆ.

– ಹೀಗೆ ಹಲವು ದೂರುಗಳು ಹೆಸ್ಕಾಂನ ಕಾರ್ಯವೈಖರಿ ಬಗ್ಗೆ ಜಿಲ್ಲೆಯಲ್ಲಿ ಆಗಾಗ ಕೇಳಿಬರುತ್ತಲೇ ಇರುತ್ತವೆ. ಜನರಿಂದ ಪ್ರತಿಭಟನೆಗಳು ಕೂಡ ನಡೆಯುತ್ತಲೇ ಇರುತ್ತವೆ.

ಎರಡು ವರ್ಷಗಳಿಂದ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಆಗಿರುವುದರಿಂದ ವಿದ್ಯುತ್ ಕೊರತೆ ಇಲ್ಲ. ಆದರೆ, ವಿತರಣೆ ಜಾಲದಲ್ಲಿ ಲೋಪವಿದೆ. ಹಳ್ಳಿಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಬಹಳಷ್ಟು ವ್ಯತ್ಯಯ ಆಗುವುದರಿಂದ ಅಲ್ಲಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹಿಡಿಶಾಪ ಹಾಕುತ್ತಿರುತ್ತಾರೆ. ಅಲ್ಲಲ್ಲಿ ನಿರಂತರ ಜ್ಯೋತಿ ಯೋಜನೆ ಜಾರಿಯಾಗಿದೆ.

ಕತ್ತಲಲ್ಲಿ ಮುಳುಗಿರುತ್ತವೆ

ನಗರದಲ್ಲೂ ಬೀದಿದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಕೆಲವು ಪ್ರಮುಖ ರಸ್ತೆಗಳಲ್ಲಿ ಹಾಗೂ ಹಲವು ಬಡಾವಣೆಗಳ ಬೀದಿಗಳಲ್ಲಿ ವಿದ್ಯುತ್ದೀಪಗಳು ಬೆಳಗುವುದೇ ಇಲ್ಲ. ಇದರಿಂದ ಅವು ಕತ್ತಲಲ್ಲಿ ಮುಳುಗಿರುತ್ತವೆ. ದೂರು ನೀಡಿದರೂ ಸ್ಪಂದನೆಯಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಪಾದಚಾರಿ ಮಾರ್ಗದಲ್ಲೇ ಪರಿವರ್ತಕ ಅಳವಡಿಸಿರುವ ನಿದರ್ಶನಗಳು ಹಲವು ಕಡೆಗಳಲ್ಲಿವೆ. ಭೂತಗತ ಕೇಬಲ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ.

‘ಪರಿವರ್ತಕಗಳನ್ನು (ಟಿಸಿ) ದುರಸ್ತಿ ಮಾಡಿಕೊಡಬೇಕು ಇಲ್ಲವೇ ಬದಲಿಸಿಕೊಟ್ಟು ಜಮೀನುಗಳಿಗೆ ನೀರು ಪೂರೈಸಲು ಅನುಕೂಲ ಕಲ್ಪಿಸಬೇಕು. ಹಣ ಕಟ್ಟಿದ ರೈತರಿಗೆ ಅಕ್ರಮ ಸಕ್ರಮ ಯೋಜನೆಯ ಲಾಭ ಸಿಗುವಂತೆ ನೋಡಿಕೊಳ್ಳಬೇಕು’ ಎಂಬ ಆಗ್ರಹ ರೈತರದಾಗಿದೆ.

ರೈತರಿಂದ ಹಲವು ದೂರು

‘ಪರಿವರ್ತಕಗಳ ದುರಸ್ತಿ ವಿಷಯದಲ್ಲಿ ಹೆಸ್ಕಾಂ ವಿಳಂಬ ನೀತಿ ಅನುಸರಿಸುತ್ತಿದೆ. ಅಕ್ರಮ ಸಕ್ರಮ ಯೋಜನೆಯಲ್ಲಿ, ಹಣ ಪಾವತಿಸಿದ್ದರೂ ಹಲವು ರೈತರ ಹೊಲಗಳಿಗೆ ವಿದ್ಯುತ್ ಸಂಪರ್ಕ ಒದಗಿಸಿಲ್ಲ’ ಎಂದು ದೂರಿದ್ದ ರೈತರು, ಹೆಸ್ಕಾಂ ಅಧಿಕಾರಿಗಳಿಗೆ ಈಚೆಗೆ ಮನವಿ ಸಲ್ಲಿಸಿದ್ದರು.

‘ಅಕ್ರಮ ಸಕ್ರಮ ಯೋಜನೆಯಲ್ಲಿ ₹ 23ಸಾವಿರ ಪಾವತಿಸಿಕೊಂಡರೂ ವಿದ್ಯುತ್ ಸಂಪರ್ಕ ನೀಡಿಲ್ಲ. ಟಿಸಿ ಅಳವಡಿಸಿಲ್ಲ. ಹೀಗಾಗಿ ನಮ್ಮ ಜಮೀನಿನಲ್ಲಿ ನೀರಾವರಿಗೆ ತೊಂದರೆಯಾಗಿದೆ. ಕೂಡಲೇ ಹೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಬೈಲಹೊಂಗಲದ ರೈತ ಕಲ್ಮೇಶ ಅಶೋಕ ಅಲಬಣ್ಣವರ ಒತ್ತಾಯಿಸಿದರು.

‘ಸವದತ್ತಿ, ಬೈಲಹೊಂಗಲ, ಯರಗಟ್ಟಿ, ಕಿತ್ತೂರು, ಖಾನಾಪುರ ತಾಲ್ಲೂಕುಗಳಲ್ಲಿ ಟಿಸಿ ಸುಟ್ಟರೂ ಹೆಸ್ಕಾಂ ಅಧಿಕಾರಿಗಳಿಂದ ತಕ್ಷಣ ಸ್ಪಂದನೆ ದೊರೆಯುತ್ತಿಲ್ಲ. ಕಚೇರಿಗೆ ಮನವಿ ಸಲ್ಲಿಸಿದರೂ ಪರಿಶೀಲಿಸುವುದಿಲ್ಲ. ಟಿಸಿಗಳ ಆವಾಂತರದಿಂದ ಬೆಳೆಗೆ ಬೆಂಕಿ ತಗುಲಿ ನಾಶವಾದ ಮತ್ತು ರೈತರು ನಷ್ಟ ಅನುಭವಿಸಿದ ಉದಾಹರಣೆಗಳಿಗೆ ಲೆಕ್ಕವಿಲ್ಲ’ ಎಂದು ದೂರಿದರವರು ನೇಗಿಲಯೋಗಿ ರೈತ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ರವಿ ಪಾಟೀಲ.

ಅಸಮರ್ಪಕ ನಿರ್ವಹಣೆ

ಬೈಲಹೊಂಗಲ: ಪಟ್ಟಣ ಸೇರಿದಂತೆ ಉಪ ವಿಭಾಗ ಮಟ್ಟದ ಬಹುತೇಕ ರೈತರ ಜಮೀನು, ರಸ್ತೆ, ಬೀದಿಗಳಲ್ಲಿ ಅಸಮರ್ಪಕ ನಿರ್ವಹಣೆಯಿಂದಾಗಿ ವಿದ್ಯುತ್ ಕಂಬಗಳು ಬಾಗಿವೆ. ಅವಘಡಕ್ಕೆ ಆಹ್ವಾನ ನೀಡುತ್ತಿವೆ. ಬೆಳೆಗಳು ಸುಟ್ಟು ಉದಾಹರಣೆಯೂ ಇವೆ. ದುರಸ್ತಿಪಡಿಸುವಂತೆ ತಿಳಿಸಿದರೂ ಕ್ರಮವಾಗದೆ ಅವಘಡಗಳು ಸಂಭವಿಸಿವೆ. ಪರಿವರ್ತಕಗಳಲ್ಲಿ ಆಗಾಗ ತಾಂತ್ರಿಕ ದೋಷ ಉಂಟಾಗಿ ಬೆಂಕಿ ಕಿಡಿ ಕಾಣಿಸುತ್ತಿರುತ್ತದೆ. ರಾಯಣ್ಣನ ಉದ್ಯಾನ, ಬಜಾರ್ ರಸ್ತೆ, ಚನ್ನಮ್ಮನ ಸಮಾಧಿ ರಸ್ತೆ ಪಕ್ಕದ ಮರದ ರೆಂಬೆ–ಕೊಂಬೆಗಳ ಬಳಿ ವಿದ್ಯುತ್ ತಂತಿಗಳು ಅಪಾಯದ ಮೂನ್ಸೂಚನೆ ನೀಡುತ್ತಿವೆ.

ಬೀಳುವ ಸ್ಥಿತಿ ಇದೆ

ಹಿರೇಬಾಗೇವಾಡಿ: ನಮ್ಮ ಜಮೀನುಗಳಲ್ಲಿ ಹಾದು ಹೋಗಿರುವ ಮಾರ್ಗದಲ್ಲಿ ವಿದ್ಯುತ್ ತಂತಿಗಳು ಅಲ್ಲಲ್ಲಿ ಬಾಗಿ ಇನ್ನೇನು ಬಿದ್ದೇ ಬಿಡುತ್ತವೆ ಎನ್ನುವಂತಹ ರೀತಿಯಲ್ಲಿವೆ. ಅಪಾಯಕ್ಕೆ ಅಹ್ವಾನ ನೀಡುವಂತಿವೆ. ಅವುಗಳನ್ನು ತಕ್ಷಣ ಸರಿಪಡಿಸಬೇಕು ಎಂದು ರೈತರಾದ ಬಸವಣ್ಣೆಪ್ಪ ಗಾಣಗಿ, ಪತ್ರೆಪ್ಪ ತೋಟಗಿ, ಚಂದ್ರಕಾಂತ ಸೋನಪ್ಪನವರ, ಸಮಾಜ ಸೇವಕ ಬಾಪು ನಾವಲಗಟ್ಟಿ ಆಗ್ರಹಿಸಿದರು.

ಮುಕ್ತಿ ಸಿಕ್ಕಿಲ್ಲ

ಎಂ.ಕೆ. ಹುಬ್ಬಳ್ಳಿ: ಗ್ರಾಮ ಪಂಚಾಯ್ತಿಯಿಂದ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ್ದರೂ ಪಟ್ಟಣದ ಒಳಗಿನ ಮುಖ್ಯರಸ್ತೆಯ ಕಲ್ಮೇಶ್ವರ ದೇವಸ್ಥಾನ ಓಣಿಯಲ್ಲಿರುವ ಹಳೆಯ ಕಬ್ಬಿಣದ ವಿದ್ಯುತ್ ಕಂಬಗಳಿಗೆ ಮುಕ್ತಿ ಸಿಗುತ್ತಿಲ್ಲ. ಮಳೆಗಾಲದಲ್ಲಿ ನೀರು ಆವರಿಸಿ ವಿದ್ಯುತ್ ಶಾಕ್ ನೀಡುವ ಈ ಕಂಬಗಳು ಜನರಿಗೆ ಆತಂಕ ತಂದಿಟ್ಟಿವೆ. ಈ ಬಗ್ಗೆ ಹಲವು ಬಾರಿ ಪಟ್ಟಣ ಪಂಚಾಯ್ತಿಯವರು ಹಾಗೂ ಹೆಸ್ಕಾಂ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಹೊಲ ಗದ್ದೆಗಳಲ್ಲಿ ಹಲವೆಡೆ ವಿದ್ಯುತ್ ಕಂಬಗಳು ವಾಲಿವೆ. ತಂತಿಗಳು ಜೋತು ಬಿದ್ದಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ. ಪರಿವರ್ತಕಗಳನ್ನು ರಸ್ತೆಗೆ ಹೊಂದಿಕೊಂಡಂತೆಯೇ ಹಾಗೂ ಮನೆಗಳ ಹತ್ತಿರವೆ ಹಾಕಲಾಗಿದೆ!

ನಿರಂತರ ಜ್ಯೋತಿಯಿಂದ ಅನುಕೂಲ

ಚನ್ನಮ್ಮನ ಕಿತ್ತೂರು: ತಾಲ್ಲೂಕಿನಲ್ಲಿ ರೈತರ ಜಮೀನುಗಳಲ್ಲಿರುವ ಪಂಪ್ಸೆಟ್ಗಳಿಗೆ ಮಾತ್ರ ಏಳು ಗಂಟೆ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದೆ. ನಗರ ಪ್ರದೇಶ ಅಥವಾ ಹೊಲದಲ್ಲಿ ಅಳವಡಿಸಲಾದ ಕಂಬಗಳು ಬಾಗಿದ್ದರೆ ತಿಳಿಸಲು ಸಹಾಯವಾಣಿ ಆರಂಭಿಸಿದೆ. ಮಾಹಿತಿ ಬಂದರೆ ಸರಿಪಡಿಸಲು ಸಿಬ್ಬಂದಿ ಕ್ರಮ ಕೈಗೊಳ್ಳುತ್ತಾರೆ ಎನ್ನುತ್ತಾರೆ ಅಧಿಕಾರಿಗಳು. ತಾಲ್ಲೂಕಿನಾದ್ಯಂತ ಹಳ್ಳಿಗಳಿಗೆ 2010ರಲ್ಲಿಯೇ ನಿರಂತರ ವಿದ್ಯುತ್ ಜ್ಯೋತಿ ಯೋಜನೆ ಜಾರಿಗೆ ಬಂದಿದೆ. ಪರಿಣಾಮ ಅಲ್ಲಿ ಹೆಚ್ಚಿನ ಸಮಸ್ಯೆ ಇಲ್ಲ. ಮಾರ್ಗದಲ್ಲಿ ನಿರ್ವಹಣೆ ಕಾರ್ಯವಿದ್ದಾಗ ಮಾತ್ರ ವಿದ್ಯುತ್ ಸಮಸ್ಯೆ ತಲೆದೋರುತ್ತದೆ ಎಂದು ಹೆಸ್ಕಾಂ ವಲಯ ಅಧಿಕಾರಿ ಜಗದೀಶ ಸಂಶಿ ಹೇಳಿದರು.

ಖಾನಾಪುರ ತಾಲ್ಲೂಕಿನ ಶೇ 80ರಷ್ಟು ಕಡೆ ದಿನದ 24 ಗಂಟೆಯೂ ವಿದ್ಯುತ್ ಪೂರೈಕೆ ಇದೆ. ಮಳೆಗಾಲದಲ್ಲಿ ಮಳೆ ಮತ್ತು ಗಾಳಿಯಿಂದಾಗಿ ಅಲ್ಲಲ್ಲಿ ತೊಂದರೆಗಳು ಎದುರಾಗುತ್ತದೆ. ಅದರಲ್ಲೂ ಅರಣ್ಯದಂಚಿನ ಹಳ್ಳಿಗಳಲ್ಲಿ ಹೆಚ್ಚು ಸಮಸ್ಯೆ ಇರುತ್ತದೆ.

ಮನೆಗಳಿಗೇ ಹೊಂದಿಕೊಂಡಿವೆ ಪರಿವರ್ತಕಗಳು!

ಗೋಕಾಕ: ಇಲ್ಲಿ ವಿದ್ಯುತ್ ಪರಿವರ್ತಕಗಳನ್ನು ಗ್ರಾಹಕರ ಮನೆಗಳಿಗೇ ಹೊಂದಿಕೊಂಡಂತೆ ಅಳವಡಿಸಲಾಗಿದೆ. ಹೆಸ್ಕಾಂ ಸಿಬ್ಬಂದಿ ತಿಂಗಳ ಮೀಟರ್ ರೀಡಿಂಗ್
ವೇಳೆ ಗಮನಿಸಿಯೂ ಗ್ರಾಹಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ನಿಷ್ಕಾಳಜಿ ತೋರುವುದು ನಡೆಯುತ್ತಿದೆ.

ಮೂರು ದಶಕಗಳಿಗೂ ಹಿಂದೆ ಮಹಾಲಿಂಗೇಶ್ವರ ಬಡಾವಣೆಯಲ್ಲಿ ಕೇವಲ ನಿವೇಶನಗಳಿದ್ದವು. ಇತ್ತೀಚಿನ ವರ್ಷಗಳಲ್ಲಿ ಮನೆಗಳು ನಿರ್ಮಾಣವಾಗಿವೆ. ನಿವೇಶನಗಳಿದ್ದ ಅವಧಿಯಲ್ಲಿ ಆಗಿನ ಕೆಇಬಿಯವರು ಅನುಕೂಲಕ್ಕೆ ತಕ್ಕಂತೆ ಪರಿವರ್ತಕಗಳನ್ನು ಹಾಕಿತ್ತು. ಮನೆಗಳು ತಲೆಎತ್ತಿದ ನಂತರ, ಪರಿವರ್ತಕಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆದಿಲ್ಲ.

ಹಲವು ಸಮಸ್ಯೆ

ಸವದತ್ತಿ: ರೈತರ ಪಂಪ್ಸೆಟ್ಗಳಿಗೆ ನಿತ್ಯ 6 ಗಂಟೆ ವಿದ್ಯುತ್ ಪೂರೈಕೆ ಇದೆ. ಪರಿಣಾಮ ಬೆಳೆಗೆ ಸಮರ್ಪಕ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಸಣ್ಣ ಪ್ರಮಾಣದ ರೈತರು ವಾರಕ್ಕೊಬ್ಬರಂತೆ ಸರತಿಯಲ್ಲಿ ಒಂದೇ ಬೋರ್ವೆಲ್ನಿಂದ ನೀರು ಹಾಯಿಸುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ವಿದ್ಯುತ್ ಕಡಿತ ಹಾಗೂ ಟಿಸಿ ಸಮಸ್ಯೆಯಾದಲ್ಲಿ ಸರತಿ ಮುಂದಿನ ವಾರಕ್ಕೆ ಬರುತ್ತದೆ. ಕಾರಣ ಬೆಳೆ ಒಣಗುತ್ತದೆ. ದುರಸ್ತಿ ಸಕಾಲದಲ್ಲಿ ಆಗುವುದಿಲ್ಲ. ಇದರಿಂದ ಸಮಸ್ಯೆ ಉಂಟಾಗಿ ರೈತರು ಪರದಾಡಬೇಕಾದ ಸ್ಥಿತಿ ಇದೆ. ಪರಿವರ್ತಕ ಬದಲಾವಣೆಗೆ ಲಂಚ ಬೇಡುತ್ತಾರೆ ಎನ್ನುವ ದೂರುಗಳಿವೆ.

ಯುಜಿ ಕೇಬಲ್ ಅಳವಡಿಕೆ

ರಾಮದುರ್ಗ: ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ಕಂಬ ಮತ್ತು ತಂತಿಗಳನ್ನು ತೆರವುಗೊಳಿಸಿ ಯುಜಿ ಕೇಬಲ್ ಅಳವಡಿಸಲಾಗಿದೆ.

‘ದೂರುಗಳಿಗೆ ತಕ್ಷಣ ಸ್ಪಂದಸಿ ಸಮಸ್ಯೆ ನಿವಾರಿಸಲಾಗುತ್ತಿದೆ. ಈ ವರ್ಷದ ಬಜೆಟ್ನಲ್ಲಿ ಅನುದಾನ ಪಡೆದು ಎಲ್ಲ ಬಡಾವಣೆಗಳಲ್ಲೂ ಯುಜಿ ಕೇಬಲ್ ಅಳವಡಿಸಿ ಕಂಬದ ಮೇಲಿನ ತಂತಿಗಳನ್ನು ತೆರವುಗೊಳಿಸಲಾಗುವುದು’ ಎಂದು ಹೆಸ್ಕಾಂ ಎಇ ರಾಮಕೃಷ್ಣ ಗುಣಗಾ ಪ್ರತಿಕ್ರಿಯಿಸಿದರು.

ವಿದ್ಯುತ್ ಸಂಬಂಧಿ ದೂರುಗಳನ್ನು ಹೆಸ್ಕಾಂಗೆ ತಿಳಿಸಲು 1912 ಟೋಲ್ ಫ್ರೀ ಸಹಾಯವಾಣಿ ಸಂಪರ್ಕಿಸಬಹುದು.

(ಪ್ರಜಾವಾಣಿ ತಂಡ: ಎಂ. ಮಹೇಶ, ರವಿ ಎಂ.ಹುಲಕುಂದ, ಚನ್ನಪ್ಪ ಮಾದರ, ಬಸವರಾಜ ಶಿರಸಂಗಿ, ಎಸ್. ವಿಭೂತಿಮಠ, ಶಿವಕುಮಾರ ಪಾಟೀಲ, ರಾಮೇಶ್ವರ ಕಲ್ಯಾಣಶೆಟ್ಟಿ, ಪ್ರದೀಪ ಮೇಲಿನಮನಿ, ಪ್ರಸನ್ನ ಕುಲಕರ್ಣಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.