ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಬೆಳಗಾವಿ | ಮುಗಿಯದ ಎಸ್‌ಟಿಪಿ: ತಪ್ಪದ ಕಿಟಿಕಿಟಿ

Published : 15 ಸೆಪ್ಟೆಂಬರ್ 2025, 2:31 IST
Last Updated : 15 ಸೆಪ್ಟೆಂಬರ್ 2025, 2:31 IST
ಫಾಲೋ ಮಾಡಿ
Comments
ಬೆಳಗಾವಿ ತಾಲ್ಲೂಕಿನ ಹಲಗಾದಲ್ಲಿ ನಿರ್ಮಿಸುತ್ತಿರುವ ತ್ಯಾಜ್ಯನೀರು ಸಂಸ್ಕರಣಾ ಘಟಕ ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ
ಬೆಳಗಾವಿ ತಾಲ್ಲೂಕಿನ ಹಲಗಾದಲ್ಲಿ ನಿರ್ಮಿಸುತ್ತಿರುವ ತ್ಯಾಜ್ಯನೀರು ಸಂಸ್ಕರಣಾ ಘಟಕ ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ
ಲಕ್ಷ್ಮೀ ಹೆಬ್ಬಾಳಕರ
ಲಕ್ಷ್ಮೀ ಹೆಬ್ಬಾಳಕರ
ಹೆಚ್ಚಿನ ಪರಿಹಾರಕ್ಕೆ ನಿರ್ಣಯ: ಲಕ್ಷ್ಮಿ ಹೆಬ್ಬಾಳಕರ
‘ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಕ್ಕೆ ಹಲಗಾದ ರೈತರು ಫಲವತ್ತಾದ ಕೃಷಿಭೂಮಿ ಬಿಟ್ಟುಕೊಟ್ಟಿದ್ದಾರೆ. ಅವರ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ನಗರಕ್ಕೆ ಹೊಂದಿಕೊಂಡ ಭೂಮಿ ಹೆಚ್ಚಿನ ಬೆಲೆಬಾಳುತ್ತವೆ. ನಗರಾಭಿವೃದ್ಧಿ ಸಚಿವ ಜಿಲ್ಲಾಧಿಕಾರಿಗಳ ಜತೆ ನಿರಂತರ ಸಭೆ ನಡೆಸಿ ಸರ್ಕಾರದ ಮಟ್ಟದಲ್ಲಿ ಪಟ್ಟು ಹಿಡಿದು ರೈತರಿಗೆ ಹೆಚ್ಚಿನ ಪರಿಹಾರ ಕೊಡಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಿಸಿದ್ದೇನೆ. ಇದಕ್ಕಾಗಿ ಮುಖ್ಯಮಂತ್ರಿ ಹಾಗೂ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಇನ್ಮುಂದೆ ಕಾಮಗಾರಿಗೆ ವೇಗ ಸಿಗಲಿದೆ ಎನ್ನುವ ವಿಶ್ವಾಸವಿದೆ’ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರೂ ಆಗಿರುವ ಸಚಿವೆ ಲಕ್ಷ್ಮಿ ಹೆಬ್ಬಾಳಕರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಅಭಯ ಪಾಟೀಲ
ಅಭಯ ಪಾಟೀಲ
ವಿಳಂಬದಿಂದ ಹಲವು ಸಮಸ್ಯೆ: ಅಭಯ ಪಾಟೀಲ
‘ಪರಿಹಾರ ನೀಡುವ ವಿಚಾರವಾಗಿ ಉಂಟಾದ ಗೊಂದಲದಿಂದ ಎಸ್‌ಟಿಪಿ ಕಾಮಗಾರಿ ವಿಳಂಬವಾಗಿದೆ. ಇದರಿಂದ ಬೆಳಗಾವಿಯಲ್ಲಿ ಒಳಚರಂಡಿಗಳು ಬ್ಲಾಕ್‌ ಆಗಿ ಹಲವು ಸಮಸ್ಯೆ ತಲೆದೋರುತ್ತಿವೆ. ಯೋಜನೆಗೆ ಭೂಮಿ ನೀಡಿದ ರೈತರಿಗೆ ಹೆಚ್ಚಿನ ಪರಿಹಾರ ಒದಗಿಸುವಂತೆ ನಾನು ಹಲವು ಬಾರಿ ಒತ್ತಾಯಿಸಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಾ ಮಂದಿರ ಉದ್ಘಾಟನೆಗೆ ಆಗಮಿಸಿದಾಗಲೂ ಗಮನಕ್ಕೆ ತಂದಿದ್ದೆ. ಈಗ ಹೆಚ್ಚಿನ ಪರಿಹಾರ ನೀಡಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು ತ್ವರಿತವಾಗಿ ಪರಿಹಾರ ನೀಡಿ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಒತ್ತಾಯಿಸಿದರು.
ಮಹಾವೀರ ಗಂದಿಗವಾಡ
ಮಹಾವೀರ ಗಂದಿಗವಾಡ
ಅಪ್ಪಾಸಾಹೇಬ ಇಂಚಲ
ಅಪ್ಪಾಸಾಹೇಬ ಇಂಚಲ
ಎಸ್‌ಟಿಪಿ ನಿರ್ಮಾಣಕ್ಕೆ ರೈತರಿಂದ 19 ಎಕರೆ, 9 ಗುಂಟೆ ಜಮೀನನ್ನು 2011ರಲ್ಲಿ ಪಡೆದುಕೊಂಡಿದ್ದೇವೆ. ಕಾಮಗಾರಿಗಾಗಿ ಅದನ್ನು ಕೆಯುಡಬ್ಲ್ಯುಎಸ್‌ಡಿಬಿಗೆ ಹಸ್ತಾಂತರಿಸಿದ್ದೇವೆ
ಶ್ರವಣಕುಮಾರ ನಾಯ್ಕ, ಉಪವಿಭಾಗಾಧಿಕಾರಿ, ಬೆಳಗಾವಿ
ನಾವು ಈ ಭೂಮಿಯಲ್ಲಿ ಭತ್ತ, ಚನ್ನಂಗಿ, ವಿವಿಧ ತರಕಾರಿ ಬೆಳೆದು ಬದುಕು ಸಾಗಿಸುತ್ತಿದ್ದೆವು. ನಮ್ಮ ಕಡೆಯಿಂದ ಒತ್ತಾಯ ಪೂರ್ವಕವಾಗಿ ಭೂಮಿ ಪಡೆದು, ಬೇಡಿಕೆಯಂತೆ ಪರಿಹಾರ ಕೊಡದೆ 14 ವರ್ಷಗಳಿಂದ ಸತಾಯಿಸುತ್ತಿದ್ದಾರೆ
ಮಹಾವೀರ ಗಂದಿಗವಾಡ, ರೈತ, ಹಲಗಾ
ಎಸ್‌ಟಿಪಿ ನಿರ್ಮಾಣಕ್ಕೆ ಪಡೆದಿರುವ ಭೂಮಿಗೆ ಹೆಚ್ಚಿನ ಪರಿಹಾರವನ್ನು ತ್ವರಿತವಾಗಿ ಕೊಡಬೇಕು. ವಿಳಂಬ ಮಾಡಬಾರದು
ಅಪ್ಪಾಸಾಹೇಬ ಇಂಚಲ, ರೈತ, ಹಲಗಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT