ಮಂಗಳವಾರ, ಜನವರಿ 18, 2022
27 °C

ಪ್ರಜಾವಾಣಿ ಸಾಧಕರು; ‘ಪಾಸಿಟಿವ್’ನವರಿಗೆ ‘ಆಶ್ರಯ’ದಾತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರದ ‘ಪಾಸಿಟಿವ್’ ಮಹಿಳೆಯೊಬ್ಬರ ಸಾಹಸಗಾಥೆ ಇದು.

ಅವರ ಹೆಸರು ನಾಗರತ್ನಾ ರಾಮಗೌಡ. 41 ವರ್ಷದ ಅವರು, ಎಚ್‌ಐವಿ ಸೋಂಕಿತೆಯಾದರೂ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಅಂಥವರ ಸೇವೆಯಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಬೆಳಗಾವಿಯ ಮಹಾಂತೇಶ ನಗರದಲ್ಲಿ ‘ಆಶ್ರಯ’ ಪ್ರತಿಷ್ಠಾನ ನಡೆಸುತ್ತಿದ್ದಾರೆ.

ಎಸ್ಸೆಸ್ಸೆಲ್ಸಿ ಮುಗಿಯುತ್ತಿದ್ದಂತೆಯೇ ಅವರಿಗೆ ಮದುವೆ ಮಾಡಲಾಯಿತು. ಒಮ್ಮೆ ರಕ್ತದ ಮಾದರಿ ತಪಾಸಣೆ ಮಾಡಿದಾಗ ಪತಿಗೆ ಎಚ್‌ಐವಿ ಇರುವುದು ದೃಢಪಟ್ಟಿತು. ಅವರಿಂದ ನಾಗರತ್ನಾ ಅವರಿಗೂ ಬಂದಿತ್ತು. ಇದರಿಂದ ಖಿನ್ನತೆ, ನೋವು ಅನುಭವಿಸಿದರು. ಬಳಿಕ ವೈದ್ಯರ ಆಪ್ತಸಮಾಲೋಚನೆಯಿಂದ ಚೇತರಿಸಿಕೊಂಡರು. ಮಗುವಿಗೆ ಜನ್ಮ ನೀಡಿದರು (ಆ ಮಗುವಿಗೆ ಸೋಂಕಿಲ್ಲ). ಈ ನಡುವೆ ಸಮಾಜದಿಂದ, ಬಂಧುಗಳಿಂದ ನೋವುಂಡರು. ಧೃತಿಗೆಡದೆ ಸಾಗಿದರು.

2016ರಿಂದ ‘ಆಶ್ರಯ’ ಸಂಸ್ಥೆ ಮೂಲಕ ಎಚ್‌ಐವಿ ಪೀಡಿತೆಯರಿಗೆ ಆಸರೆಯಾಗಿದ್ದಾರೆ. ಶಿಕ್ಷಣ, ಜೀವನ ಕೌಶಲ ತರಬೇತಿ ನೀಡುತ್ತಿದ್ದಾರೆ. ವಿಧವೆಯರು, ಸೋಂಕಿತೆ ಯರು ಹಾಗೂ ಮಕ್ಕಳ ಕಲ್ಯಾಣಕ್ಕೆ ಶ್ರಮಿಸುತ್ತಿ ದ್ದಾರೆ. ಜಾಗೃತಿಯನ್ನೂ ಮೂಡಿ ಸುತ್ತಿದ್ದಾರೆ.

 

ಕೌನ್ಸೆಲಿಂಗ್‌ ಮಾಡುತ್ತಿದ್ದಾರೆ. ಹಲವು ಪ್ರಶಸ್ತಿ–ಪುರಸ್ಕಾರ, ಸನ್ಮಾನಕ್ಕೆ ಭಾಜನವಾ ಗಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ಗಳಿಸಿ, ವಿಶಿಷ್ಟ ಸಾಧಕಿಯಾಗಿ ಹೊರ ಹೊಮ್ಮಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.