ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಭಾನುವಾರ ನಸುಕಿನಿಂದಲೂ ಜೋರು ಗಾಳಿ, ಮಳೆ

Last Updated 16 ಮೇ 2021, 2:00 IST
ಅಕ್ಷರ ಗಾತ್ರ

ಬೆಳಗಾವಿ: 'ತೌಕ್ತೆ' ಚಂಡಮಾರುತದ ಪರಿಣಾಮ ನಗರದಲ್ಲಿ ಭಾನುವಾರ ನಸುಕಿನಿಂದಲೂ ಜೋರು ಗಾಳಿಯೊಂದಿಗೆ ಮಳೆಯಾಗುತ್ತಿದೆ.

ಶನಿವಾರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಆಗಾಗ ಮಳೆಯಾಗಿತ್ತು. ಗಾಳಿಯ ಅಬ್ಬರವೂ ಜೋರಾಗಿತ್ತು. ಈ ವಾತಾವರಣ ನಗರದಲ್ಲಿ ಭಾನುವಾರವೂ ಮುಂದುವರಿದಿದೆ.

ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಈ ಸಮಯದಲ್ಲಿ ರಸ್ತೆಬದಿ ವ್ಯಾಪಾರಿಗಳು ಒಂದಷ್ಟು ವ್ಯಾಪಾರ ಮಾಡಿಕೊಳ್ಳುತ್ತಿದ್ದರು ಮತ್ತು ಗ್ರಾಹಕರು ತರಕಾರಿ, ಹಾಲು, ಹಣ್ಣು, ಮಾಂಸ ಮೊದಲಾದವುಗಳನ್ನು ತಂದುಕೊಳ್ಳುತ್ತಿದ್ದರು. ಮಳೆಯಿಂದಾಗಿ ಅವರು ತೊಂದರೆ ಅನುಭವಿಸಿದರು. ವಾಯುವಿಹಾರಕ್ಕೆ ಹೋಗುವವರಲ್ಲಿ ಬಹುತೇಕರು ಮನೆಯಲ್ಲೇ ಉಳಿದರು.

ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ದಿನದ ಬಹುತೇಕ ಸಮಯ ಜೋರು ಗಾಳಿ ಮುಂದುವರಿಯಲಿದೆ ಹಾಗೂ ಆಗಾಗ ಮಳೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT