ಮಂಗಳವಾರ, ಸೆಪ್ಟೆಂಬರ್ 22, 2020
22 °C

ಟ್ಯೂಬ್‌ ಬೋಟ್‌ ಪಂಕ್ಚರ್‌: ಸಂಕಷ್ಟದಲ್ಲಿ 150 ಮಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ತಾಲ್ಲೂಕಿನ ಸವದಿ ಗ್ರಾಮದಲ್ಲಿ ಕೃಷ್ಣಾ ನದಿ ಪ್ರವಾಹದಲ್ಲಿ 150 ಮಂದಿ ಸಿಲುಕಿದ್ದಾರೆ.

ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲು ತೆರಳಿದ್ದ ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳದ ಸಿಬ್ಬಂದಿ ಟ್ಯೂಬ್‌ ಬೋಟ್‌ ಪಂಕ್ಚರ್‌ ಆಗಿದ್ದರಿಂದ ಸ್ವತಃ ಸಂಕಷ್ಟಕ್ಕೆ ಒಳಗಾಗಿದ್ದರು. ಲೈಫ್‌ ಜಾಕೆಟ್ ಧರಿಸಿದ್ದರಿಂದ ಅವರು ಸುರಕ್ಷಿತವಾಗಿ ವಾಪಸಾದರು. ಆದರೆ, ಅಲ್ಲಿ ಉಳಿದಿರುವವರು ಪ್ರಾಣ ಉಳಿಸಿಕೊಳ್ಳಲು ಕೆಲವರು ಹುಣಸೆಮರದ ಮೇಲೆ ಕುಳಿತಿದ್ದಾರೆ ಎಂದು ತಿಳಿದುಬಂದಿದೆ.

ಟ್ಯೂಬ್ ಪಂಕ್ಚರ್ ಆಗಿದ್ದರಿಂದ, ಹಲವು ಗಂಟೆಗಳ ನಂತರ ಬೇರೆ ಊರಿನಿಂದ ಇನ್ನೊಂದು ದೋಣಿ ತಂದು ಕೆಲವರನ್ನು ಕರೆತರಲಾಯಿತು. ಪರಿಣಾಮ, ರಕ್ಷಣಾ ಕಾರ್ಯ ಆಮೆಗತಿಯಲ್ಲಿ ನಡೆಯಿತು.

ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೂ ಬೋಟ್‌ಗಳನ್ನು ಸುಸಜ್ಜಿತವಾಗಿ ಇಡಲು ಮತ್ತು ಯಾಂತ್ರಿಕ ಬೋಟ್‌ಗಳನ್ನು ಒದಗಿಸಲು ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು