ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಎಟಿಎಂ ಒಡೆದು ₹40 ಲಕ್ಷ ಕಳವು

Published 9 ನವೆಂಬರ್ 2023, 14:13 IST
Last Updated 9 ನವೆಂಬರ್ 2023, 14:13 IST
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಚಿಕ್ಕೋಡಿ ಹಾಗೂ ಅಂಕಲಿ ಪಟ್ಟಣಗಳಲ್ಲಿ ಬುಧವಾರ ತಡರಾತ್ರಿ ಎರಡು ಎಟಿಎಂ ಒಡೆದ ಕಳ್ಳರು ₹40 ಲಕ್ಷಕ್ಕೂ ಅಧಿಕ ಹಣ ಕಳವು ಮಾಡಿದ್ದಾರೆ. ಇನ್ನೊಂದು ಎಟಿಎಂ ಒಡೆಯಲು ವಿಫಲ ಯತ್ನ ನಡೆಸಿದ್ದಾರೆ.

ತಾಲ್ಲೂಕಿನ ಅಂಕಲಿ ಪಟ್ಟಣದ ಬಸ್ ನಿಲ್ದಾಣ ಎದುರು ಇರುವ ಎಕ್ಸಿಸ್ ಬ್ಯಾಂಕ್‌ಗೆ ಕನ್ನ ಹಾಕಿದ ಕಳ್ಳರು, ಸಿಸಿಟಿವಿ ಕ್ಯಾಮೆರಾಗೆ ಕಪ್ಪು ಬಣ್ಣದ ಸ್ಪ್ರೇ ಮಾಡಿ, ಗ್ಯಾಸ್‌ ಕಟರ್‌ನಿಂದ ಎಟಿಎಂ ಯಂತ್ರ ಕೊರೆದು ಹಣ ದೋಚಿದ್ದಾರೆ. ಈ ಎಟಿಎಂನಲ್ಲಿ ₹17 ಲಕ್ಷ ಜಮೆ ಮಾಡಲಾಗಿತ್ತು. ಅದರಲ್ಲಿ ಎಷ್ಟು ಕಳವಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಚಿಕ್ಕೋಡಿಗೆ ಬಂದು, ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮುಂದಿನ ಎಟಿಎಂ ಕೇಂದ್ರದಲ್ಲಿ ₹23 ಲಕ್ಷ ನಗದು ಕದ್ದಿದ್ದಾರೆ. ಹತ್ತಿರದಲ್ಲೇ ಇರುವ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಎಟಿಎಂಗೂ ನುಗ್ಗಲು ಯತ್ನಿಸಿದ್ದಾರೆ.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ವೇಣುಗೋಪಾಲ ಅವರ ತಂಡ ಅಂಕಲಿಯ ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಎಫ್‌ಎಸ್‌ಎಲ್, ಶ್ವಾನದಳದಿಂದಲೂ ಪರಿಶೀಲನೆ ನಡೆಸಲಾಯಿತು.

‘ಈ ಸರಣಿ ಕಳ್ಳತನವು ರಾತ್ರಿ 9 ರಿಂದ ನಸುಕಿನ 3ರ ಮಧ್ಯದಲ್ಲಿ ನಡೆದಿವೆ. ಬಿಳಿ ಬಣ್ಣದ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು, ಮುಂಚಿನಿಂದಲೇ ಉಪಾಯ ಮಾಡಿ ಏಕಕಾಲಕ್ಕೆ ಮೂರೂ ಕಡೆ ಕನ್ನ ಹಾಕಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕೋಡಿಯಿಂದ ಮಹಾರಾಷ್ಟ್ರದ ಮಿರಜ್‌ನತ್ತ ಆರೋಪಿಗಳು ತೆರಳಿದ ಸುಳಿವು ಸಿಕ್ಕಿದೆ. ವಿಜಯಪುರ ತಾಲ್ಲೂಕಿನ ಶಿವಣಗಿಯಲ್ಲೂ ಸೋಮವಾರ ಇದೇ ಮಾದರಿಯಲ್ಲಿ ಕಳ್ಳತನವಾಗಿತ್ತು. ಒಂದೇ ತಂಡದಿಂದ ಸರಣಿ ಕಳ್ಳತನ ನಡೆದಿದಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT