ಸವದತ್ತಿ: ಮಹಾನಗರ ಪಾಲಿಕೆ, ನಗರ ಸಭೆ ಹಾಗೂ ಪುರಸಭೆಗಳ ನೌಕರರ ಬೇಡಿಕೆ ಈಡೇರಿಸದ ಕಾರಣ ಮಂಗಳವಾರ ಇಲ್ಲಿನ ಯಲ್ಲಮ್ಮ ಪುರಸಭೆ ಎದುರು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯಿತು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ದೂರಪ್ಪ ಗುರನವರ ಮಾತನಾಡಿ, ‘ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಪಾಲಿಕೆ, ನಗರ ಹಾಗೂ ಪುರಸಭೆಗಳ ಎಲ್ಲ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಜ್ಯೋತಿ ಸಂಜೀವಿನಿ, ಕೆಜಿಐಡಿ ಹಾಗೂ ಇತರೆ ಸೌಲಭ್ಯಗಳನ್ನು ನೀಡಬೇಕು. ಹೊರಗುತ್ತಿಗೆ ಆಧಾರದಲ್ಲಿ ಸೇವೆಯಲ್ಲಿರುವ ವಾಹನ ಚಾಲಕರು, ನೀರು ಸರಬರಾಜುದಾರರು, ಸ್ವಚ್ಛತಾ ಕಾರ್ಮಿಕರು, ಯುಜಿಡಿ ಸಹಾಯಕರು ಸೇರಿ ಎಲ್ಲರನ್ನು ನೇರ ಪಾವತಿಗೆ ಒಳಪಡಿಸಿ, ಕ್ರಮೇಣ ಕಾಯಂಗೊಳಿಸಬೇಕು’ ಎಂದು ಆಗ್ರಹಿಸಿದರು.

ಕಾರ್ಯದರ್ಶಿ ಯಲ್ಲಪ್ಪ ಬೇವಿನಗಿಡದ ಮಾತನಾಡಿದರು. ಪೌರ ಕಾರ್ಮಿಕರು, ವಾಹನ ಚಾಲಕರು ಹಾಗೂ ಇತರ ನೌಕರರಿಂದ ಕಚೇರಿ ಕಾರ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಯಿತು. ಸಂಘದ ಉಪಾಧ್ಯಕ್ಷ ರಾಘವೇಂದ್ರ ಕೊರವರ, ಮಾರುತಿ ಶಿಂಗೆ, ಲಕ್ಷ್ಮಣ ಮಾದರ, ಸಂತೋಷ ಕಾಳೆ, ರವಿ ಮಾದರ, ಪರಶುರಾಮ ಹಿರೇಕೆಂಚಮ್ಮನವರ, ಹಣಮಂತ ಮೂಡಲಗಿ, ಶಿವಾನಂದ ಜಂಬೂದ್ವೀಪ, ಪ್ರಕಾಶ ಬುಳ್ಳನವರ ಹಾಗೂ ಪ್ರಮುಖರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.