ಮಂಗಳವಾರ, ಡಿಸೆಂಬರ್ 7, 2021
24 °C

ವಚನಾಮೃತ: ಇಂದ್ರಿಯಗಳ ಬಲೆಗೆ ಸಿಲುಕಬಾರದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

––––––––

ಕಾಯವಿಕಾರ ಕಾಡಿಹುದಯ್ಯಾ;

ಮನೋವಿಕಾರ ಕೂಡಿಹುದಯ್ಯಾ;

ಇಂದ್ರಿಯವಿಕಾರ ಸುಳಿವುದಯ್ಯಾ!

ಸುಳಿವಿನೊಳಗೆ ಸುಳಿಯುತ್ತಲಿದ್ದೇನೆ;

ಸಿಲುಕಿಸದಿರಯ್ಯಾ!

ಅನ್ಯ ಚಿತ್ತವಿರಸದಿರಯ್ಯಾ; ನಿಮ್ಮ ಚಿತ್ತವಿರಿಸಯ್ಯಾ!

ಕೂಡಲಸಂಗಮ ದೇವಾ, ಇದನೆ ಬೇಡುವೆನಯ್ಯಾ!

ಈ ಜಗತ್ತಿನಲ್ಲಿಯೆ ಬುದ್ಧಿವಂತ ಪ್ರಾಣಿಯೆಂದರೆ ಮನುಷ್ಯ. ಅವನಲ್ಲಿರುವ ಅತಿಯಾದ ಬುದ್ಧಿವಂತಿಕೆಯೇ ಒಮ್ಮೊಮ್ಮೆ ಅವನನ್ನು ದುಷ್ಟನನ್ನಾಗಿ ಮಾಡುತ್ತದೆ. ಅದಕ್ಕೆ ಬಸವಣ್ಣನವರು ಇಲ್ಲಿ ಮನುಷ್ಯನಿಗೆ ಯಾವ ಯಾವ ರೀತಿಯ ವಿಕಾರಗಳು ಕಾಡುತ್ತವೆ ಎನ್ನುವುದರ ಕುರಿತಾಗಿ ವಚನದ ಮೂಲಕ ವಿವರಿಸಿದ್ದಾರೆ. ನಮ್ಮ ಶರೀರವು ಸುಖಾಪೇಕ್ಷಿಯಾಗಿರುವುದರಿಂದ ಸದಾ ಕಾಲ ದೈಹಿಕ ಆನಂದವನ್ನೆ ಬಯಸುತ್ತದೆ. ಮನಸ್ಸು ತನಗೆ ಬೇಕಾದುದನ್ನೇ ಬಯಸುತ್ತದೆ. ಇಂದ್ರಿಯಗಳು ತಮಗೆ ಇಷ್ಟವಾದುದರ ಕುರಿತಾಗಿಯೆ ಚಿಂತಿಸುತ್ತವೆ. ಇಂತಹ ಸಂದರ್ಭದಲ್ಲಿ ಒಳ್ಳೆಯ ವಿಷಯಗಳ ಕುರಿತು ಚಿಂತಿಸಲು ಸಮಯವೇ ಸಿಗುವುದಿಲ್ಲ. ದೇಹ, ಮನಸ್ಸು, ಇಂದ್ರಿಯಗಳ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದೇನೆ. ಇವುಗಳ ಕುರಿತು ಚಿಂತಿಸದೆ ಸದಾಕಾಲ ನಿನ್ನದೆ ಧ್ಯಾನ ಮಾಡುವಂತೆ ಮಾಡಯ್ಯ. ಇದನ್ನಲ್ಲದೆ ಮತ್ತೇನನ್ನೂ ಬೇಡೆನು ಎಂದು ಪ್ರಾರ್ಥಿಸಿದ್ದಾರೆ ಬಸವಣ್ಣ. ನಾವೂ ಅವರನ್ನೆ ಪಾಲಿಸೋಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.