ಸೋಮವಾರ, ಜುಲೈ 4, 2022
24 °C

ವಚನಾಮೃತ: ಶುದ್ಧ ಮನಸ್ಸು ನಮ್ಮದಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಳಿಯ ಕರಕೆ-ಕಣಗಿಲೆಲೆಯ

ತೊರೆಯ ತಡಿಯ ಮಳಲ ತಂದು

ಗೌರಿಯ ನೋನುವ ಬನ್ನಿರೆ

ಚಿಕ್ಕ ಚಿಕ್ಕ ಮಕ್ಕಳೆಲ್ಲರು ನೆರೆದು ಅನುಪಮ ದಾನಿ

ಕೂಡಲಸಂಗಮದೇವ ಗಂಡನಾಗಬೇಕೆಂದು

ರಾಗ, ದ್ವೇಷಗಳ ಅರಿವು ಇರದ ಶುಭ್ರ ಮನಸ್ಸನ್ನು ಹೊಂದಿರುವ ಮಕ್ಕಳೆಲ್ಲರು ಸೇರಿ ಭಗವಂತನ ಪೂಜೆ ಮಾಡುವ ಆಟವನ್ನು ಯಾವ ರೀತಿ ಆಡುತ್ತಾರೆ ಎನ್ನುವುದನ್ನು ಉದಾಹರಣೆಗಳ ಸಹಿತವಾಗಿ ಬೆಡಗಿನ ಶೈಲಿಯಲ್ಲಿ ಅದ್ಭುತವಾಗಿ ಈ ವಚನದಲ್ಲಿ ಚಿತ್ರಿಸಲಾಗಿದೆ. ನಿತ್ಯವೂ ನೀರಿನ ತೊರೆಗಳಿಂದ ಸ್ವಚ್ಛವಾಗುವ ಮರಳನ್ನು ತಂದು ಮೂರ್ತಿಯನ್ನು ಮಾಡಿ, ವಿಶೇಷವಾದ ಬಿಳಿಯ ಕರಕೆ ಹಾಗೂ ಕಣಗಿಲ ಹೂವುಗಳಿಂದ ಸಿಂಗರಿಸಿ, ನಮಗೆಲ್ಲ ಸಕಲವನ್ನೂ ಸರ್ವಸ್ವವನ್ನೂ ದಾನ ಮಾಡಿದ ಅನುಪಮವಾದ ಭಗವಂತನ (ಕೂಡಲಸಂಗಮದೇವನ)ನನ್ನೆ ಪತಿಯನ್ನಾಗಿಸಿ ಪೂಜಿಸೋಣ ಬನ್ನಿರಿ ಎಂದು ಭಕ್ತಿಯಿಂದ ಪ್ರಾರ್ಥಿಸಿದ್ದಾರೆ. ಮಕ್ಕಳಂತೆಯೇ ಶುದ್ಧ ಮನಸ್ಸು ನಮ್ಮದಾಗಬೇಕು.

–ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು