ಬೆಳಗಾವಿಯ ಸುವರ್ಣ ವಿಧಾನಸೌಧ ಬಳಿ ಇರುವ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದವರು ಪ್ರತಿಭಟನೆ ಮಾಡಿದರು
ಸುವರ್ಣ ವಿಧಾನಸೌಧ ಬಳಿಯ ವೇದಿಕೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದವರು ಪ್ರತಿಭಟನೆ ನಡೆಸಿದರು
ಸರ್ಕಾರದಿಂದಲೇ ರೈತ ದಿನ ಆಚರಿಸಿ
‘ಪ್ರತಿವರ್ಷ ಡಿ.23ರಂದು ರಾಜ್ಯ ಸರ್ಕಾರದ ವತಿಯಿಂದಲೇ ರೈತ ದಿನ ಆಚರಿಸುವ ಕುರಿತು ಸರ್ಕಾರ ಇದೇ ಅಧಿವೇಶನದಲ್ಲಿ ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿ ಸೊರಬದ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಟ್ರಸ್ಟ್‌ನವರು ಒತ್ತಾಯಿಸಿದರು. ‘ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಗ್ರಾಮೀಣ ಭಾಗದಲ್ಲಿ ಇರುವ ಪಶು ಆಸ್ಪತ್ರೆಗಳು 24/7 ಮಾದರಿಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಆಗ್ರಹಿಸಿದರು. ಮುಖಂಡರಾದ ದತ್ತಾತ್ರೇಯ ಕೆ.ವಿ. ಕೆ.ಪ್ರಭಾಕರ ರಾಯ್ಕರ ಜೆ.ಎಸ್. ಚಿದಾನಂದಗೌಡ ನೇತೃತ್ವ ವಹಿಸಿದ್ದರು.