ಮೂಡಲಗಿ: ‘ಶಿವಾಪುರ ಗ್ರಾಮವು ಅಂಕಲಗಿಯ ಅಡವಿಸಿದ್ಧೇಶ್ವರರು ನಡೆದಾಡಿದ ಪಾವನ ಕ್ಷೇತ್ರವಾಗಿದ್ದು ಸುತ್ತಮುತ್ತಲಿನ ಗ್ರಾಮಗಳಿಗೆ ಶಿವಾಪುರ ಮಠವು ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆಯಲಿ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ತಾಲ್ಲೂಕಿನ ಶಿವಾಪುರ (ಹ) ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಕಲ್ಮಶವಾಗಿರುವ ಬದುಕಿನಲ್ಲಿ ಶ್ರೀಗಳ, ಶರಣರ ಮಾತುಗಳನ್ನು ಕೇಳುವ ಮೂಲಕ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ಶಿವಾಪುರ ಮಠದಲ್ಲಿ ಅಂಥ ಆಧ್ಯಾತ್ಮಿಕ ಕಾರ್ಯಚಟುವಟಿಕೆಗಳ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಬಂಡಿಗಣಿಯ ಬಸವಗೋಪಾಲ ನೀಲಮಾಣಿಕ ಮಠದ ದಾಸೋಹ ರತ್ನ ಅನ್ನದಾನೇಶ್ವರ ಅಪ್ಪಾಜಿ ಹಾಗೂ ಅಡವಿಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿ ಮಾತನಾಡಿದರು.

ಗಾಳೇಶ್ವರ ಮಠದ ವೆಂಕಟೇಶ್ವರ ಮಹಾರಾಜ್ಯರು, ರೇವಣಸಿದ್ದೇಶ್ವರ ಮಠದ ಗುರುಸಿದ್ದೇಶ್ವರ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಪ್ರಮುಖರಾದ ಶಂಕರಗೌಡ ಪಾಟೀಲ, ವೆಂಕಣ್ಣ ಕೇದಾರಿ, ಕೆಂಪಣ್ಣ ಮುಧೋಳ, ಶ್ರೀಕಾಂತ ಕೌಜಲಗಿ, ಮಹಾದೇವ ಮಸರಗುಪ್ಪಿ, ಬಸವರಾಜ ಗಾಡವಿ, ಈಶ್ವರ ಗಾಡವಿ, ಮಹಾಂತೇಶ ಕುಡಚಿ, ಉಮೇಶ ಮುಧೋಳ, ಪರಪ್ಪ ಗಿರೆಣ್ಣವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.