ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ: ರಾಷ್ಟ್ರಮಟ್ಟಕ್ಕೆ ಆಯ್ಕೆ 

Published 29 ಡಿಸೆಂಬರ್ 2023, 13:16 IST
Last Updated 29 ಡಿಸೆಂಬರ್ 2023, 13:16 IST
ಅಕ್ಷರ ಗಾತ್ರ

ಮೂಡಲಗಿ: ಮೂಡಲಗಿ ಶೈಕ್ಷಣಿಕ ವಲಯದ ಬಳೋಬಾಳದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಬೆಂಗಳೂರಿನ ವಿವೇಕಾನಂದ ಯೋಗ ಅನುಷ್ಠಾನ ಕುಟೀರದ ಆತಿಥ್ಯದಲ್ಲಿ ಜರುಗಿದ ಹಿಮಾಲಯ ಯೋಗ ಒಲಂಪಿಯಾಡ್‌ –2023ರ ಯೋಗ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಜಯಲಕ್ಷ್ಮಿ ಪರುಶರಾಮ ಪಾಟೀಲ, ಕಾವೇರಿ ಯಮನೂರ ಸಂಕನ್ನವರ, ದೀಪಾ ಸುನೀಲ ಲೋಹಾರ, ಪ್ರಿಯಂಕಾ ನಿಂಗಪ್ಪ ಕೊಡ್ಲಿಕಾರ ಇವರು ಯೋಗ ಸ್ಪರ್ಧೇಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕ ಬಿ.ಟಿ. ಬಡವಣ್ಣಿ ಅವರನ್ನು ಬಿಇಒ ಅಜಿತ ಮನ್ನಿಕೇರಿ, ದೈಹಿಕ ಪರಿವೀಕ್ಷಕ ಜುನೇದ ಪಟೇಲ ಮತ್ತು ಮುಖ್ಯ ಶಿಕ್ಷಕರು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT