ಬುಧವಾರ, ಜನವರಿ 20, 2021
27 °C

ಎತ್ತಿನ‌ಗಾಡಿಗೆ ಬೈಕ್ ಡಿಕ್ಕಿ: ಕಬ್ಬಿಣದ ಸಲಾಕೆ ಹೊಕ್ಕು ದಂಪತಿ ಸ್ಥಳದಲ್ಲೇ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಟ್ಟೂರು: ತಾಲ್ಲೂಕಿನ ಬೆನಕನಹಳ್ಳಿ ಬಳಿ ಎತ್ತಿನ ಬಂಡಿಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.

ನಿವೇದಿತಾ(23), ಶಿವಕುಮಾರ್(34) ಮೃತರು. ನಿವೇದಿತಾ ತಮ್ಮ ತವರೂರು ಜಗಳೂರು ತಾಲ್ಲೂಕಿನ ಹೊಸಕೆರೆಯಿಂದ ಶಿವಕುಮಾರ್ ಅವರ ಸಂಡೂರಿಗೆ ಹೊರಟಿದ್ದರು. ಹೊಸಕೆರೆಯಿಂದ- ಸಂಡೂರಿಗೆ ಹೋಗುವ ಮಾರ್ಗ ಮಧ್ಯೆ ಅಪಘಾತವಾಗಿದೆ.

ಬೈಕ್‌ ಎತ್ತಿನಗಾಡಿಗೆ ಡಿಕ್ಕಿ ಹೊಡೆದ ರಭಸಕ್ಕೆ ಗಾಡಿಯ ಮುಂಭಾಗದ ಕಬ್ಬಿಣದ ಸಲಾಕೆ(ಮೋಕು) ಇಬ್ಬರ ಎದೆಗೂ ಹೊಕ್ಕಿ, ತೀವ್ರಗಾಯಗಳಾದ ಪರಿಣಾಮ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ‌.

ಎತ್ತಿನ‌ಗಾಡಿ ಸಾವರನಿಗೂ ಗಾಯಗಳಾಗಿವೆ ಎಂದು ಪಿಎಸ್ಐ ಎಚ್. ನಾಗಪ್ಪ‌ ತಿಳಿಸಿದರು. ಸ್ಥಳಕ್ಕೆ ಕೊಟ್ಟೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು