ಶನಿವಾರ, ಜನವರಿ 18, 2020
26 °C
ಸ್ಥಳೀಯರ ವಿರೋಧದಿಂದ ನಿನ್ನೆ ವಾಪಸಾಗಿದ್ದ ಪಕ್ಷದ ಕಾರ್ಯಕರ್ತರು

ಚಲವಾದಿಕೇರಿಯಲ್ಲಿ ಬಿಜೆಪಿಯಿಂದ ಸಿಎಎ ಜನಜಾಗೃತಿ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹೊಸಪೇಟೆ: ಪೌರತ್ವ ತಿದ್ದುಪಡಿ ಕಾಯ್ದೆ ಕರಪತ್ರ ಹಂಚಿ ಜನಜಾಗೃತಿ ನಡೆಸಲು ಉದ್ದೇಶಿಸಿದ್ದ ಬಿಜೆಪಿ ಸೋಮವಾರ ಸ್ಥಳೀಯರ ವಿರೋಧದಿಂದ ತಡೆಹಿಡಿದು ಮಂಗಳವಾರ ಮತ್ತೆ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದೆ.

ಸ್ಥಳದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಜನಜಾಗೃತಿಗೆ ಪೊಲೀಸ್ ಇಲಾಖೆ ಅವಕಾಶ ಕೊಟ್ಟಿರುವುದರಿಂದ ಚಲವಾದಿಕೇರಿ ರಸ್ತೆಯಲ್ಲಿ ಗೋ ಬ್ಯಾಕ್ ಎಂಬ ಬರೆಯಲಾಗಿದೆ. ನಾವು ಸಿಎಎ ತಿರಸ್ಕರಿಸುತ್ತೇವೆ ಎಂಬ ಘೋಷಣೆ ಹೊಂದಿರುವ ಪೋಸ್ಟರ್ ಗಳನ್ನು ಅಂಟಿಸಲಾಗಿದೆ.


ಮನೆ ಹಾಗೂ ಮಳಿಗೆಗಳ ಮುಂದೆ ಅಂಟಿಸಿರುವ ಪೋಸ್ಟರ್

ಚಲವಾದಿಕೇರಿಯಲ್ಲಿ ಅಂಗಡಿ ಮುಂಗಟ್ಟು, ಮನೆಗಳ ಬಾಗಿಲು ಬಂದ್ ಮಾಡಿ ಸ್ಥಳೀಯರು ಬಿಜೆಪಿಯ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಾಂಕೇತಿಕ ವಿರೋಧ ವ್ಯಕ್ತಪಡಿಸಿದ್ದಾರೆ. ಶಾಸಕರಿಂದ ಕರ ಪತ್ರ ತೆಗೆದುಕೊಳ್ಳಲು ಸ್ಥಳೀಯರ ನಿರಾಕರಿಸಿದರು. 


ಅಂಗಡಿ ಮುಂಗಟ್ಟು, ಮನೆಗಳ ಬಾಗಿಲು ಬಂದ್ ಮಾಡಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಾಂಕೇತಿಕ ವಿರೋಧ

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು