ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿ ಸದಸ್ಯತ್ವದ ಗುರಿ 60 ಸಾವಿರ’

Last Updated 3 ಜುಲೈ 2019, 13:02 IST
ಅಕ್ಷರ ಗಾತ್ರ

ಹೊಸಪೇಟೆ: ‘ಈ ಸಲ ವಿಜಯನಗರ ಕ್ಷೇತ್ರದಲ್ಲಿ 60 ಸಾವಿರ ಜನರನ್ನು ಪಕ್ಷದ ಸದಸ್ಯತ್ವ ಕೊಡಿಸಲು ಕಾರ್ಯಕರ್ತರು ಶ್ರಮಿಸಬೇಕು’ ಎಂದುಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ ಗೋಂದಿ ತಿಳಿಸಿದರು.

ಬುಧವಾರ ನಗರದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಲೋಕಸಭೆ ಚುನಾವಣೆಯಲ್ಲಿ ಸಂಘಟನಾತ್ಮಕವಾಗಿ ಕೆಲಸ ಮಾಡಿದ್ದರಿಂದ ವಿಜಯನಗರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗೆ 18 ಸಾವಿರ ಲೀಡ್‌ ಸಿಕ್ಕಿದೆ. ಸದಸ್ಯತ್ವ ಮಾಡುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಸುಲಭವಾಗಿ 60 ಸಾವಿರಕ್ಕೂ ಅಧಿಕ ಸದಸ್ಯತ್ವ ಮಾಡಬೇಕು. ಇದರಿಂದ ಪಕ್ಷ ಬಲವರ್ಧನೆಗೊಳ್ಳಲು ಸಹಾಯಕವಾಗಲಿದೆ’ ಎಂದು ಹೇಳಿದರು.

‘ಶ್ಯಾಮಪ್ರಸಾದ್ ಮುಖರ್ಜಿಯವರ ಜನ್ಮದಿನವಾದಜು. 6ರಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ ಅವರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡುವರು. ಅಂದಿನಿಂದ ಆ.11ರ ವರೆಗೆ ಅಭಿಯಾನ ಜರುಗಲಿದೆ. ಕಾರ್ಯಕರ್ತರು ಶ್ರಮದಾನದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು’ ಎಂದು ಸೂಚಿಸಿದರು.

ಮಂಡಲ ಅಧ್ಯಕ್ಷ ಅನಂತ ಪದ್ಮನಾಭ, ‘ವಿಜಯನಗರ ಕ್ಷೇತ್ರದಲ್ಲಿ 264 ಬೂತ್‌ಗಳಿವೆ. ಒಂದು ದಿನಕ್ಕೆ ಒಂದು ಬೂತ್‌ನಲ್ಲಿ 200 ಸದಸ್ಯರನ್ನು ಮಾಡಿದರೆ ನಾಲ್ಕು ದಿನಗಳಲ್ಲಿ 60 ಸಾವಿರದ ಗುರಿ ಮುಟ್ಟಬಹುದು. ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಸದಸ್ಯತ್ವ ಅಭಿಯಾನದ ಸಂಚಾಲಕ ರಾಮನಗೌಡ,ಮುಖಂಡರಾದ ಅಶೋಕ ಜೀರೆ, ಬಸವರಾಜ ನಾಲತ್ವಾಡ, ಗುದ್ಲಿ ಪರಶುರಾಮ, ಸಾಲಿ ಸಿದ್ದಯ್ಯ ಸ್ವಾಮಿ, ಕಟಗಿ ರಾಮಕೃಷ್ಣ, ಪಂಚಪ್ಪ, ಗಾದಿಲಿಂಗಪ್ಪ, ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT