ಮಂಗಳವಾರ, ಮೇ 26, 2020
27 °C

ಕೊರೊನಾ ಭೀತಿಯ ಮಧ್ಯೆಯೂ ಸಂತೆಗೆ ಸೇರಿದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾನಹೊಸಹಳ್ಳಿ: ಸಮೀಪದ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿ ಕೊರೊನಾ ಭೀತಿಯ ಮಧ್ಯೆಯೂ ಜನರು ಸಂತೆಯಲ್ಲಿ ಗುಂಪು ಸೇರಿದ್ದಾರೆ.

ಕೊರೊನಾ ಸೋಂಕು ಹರಡಬಾರದು ಎನ್ನುವ ಕಾರಣಕ್ಕೆ ಜಿಲ್ಲಾಡಳಿತ ಎಲ್ಲಾ ಸಂತೆ, ಜಾತ್ರೆಗಳನ್ನು ರದ್ದು ಮಡಿ ಅದೇಶ ಹೊರಡಿಸಿದೆ. ಆದರೆ ಪ್ರತಿ ಸೋಮವಾರ ಇಲ್ಲಿ ನಡೆಯುತ್ತಿದ್ದ ಸಂತೆ ಎರಡು ವಾರಗಳಿಂದ ಬಂದ್ ಅಗಿದ್ದು, ಇಂದು ಮತ್ತೆ ಪ್ರಾರಂಭವಾಗಿದೆ.

 ಇದರಿಂದ ನೂರಾರು ಜನರು ಸಂತೆಯಲ್ಲಿ ಗುಂಪುಗೂಡಿ ತರಕಾರಿ ಕೊಳ್ಳಲು ಮುಂದಾಗಿದ್ದರು. ಕೊರೊನಾ ತಡೆಗಟ್ಟುಲು ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, ಇದನ್ನು ಲೆಕ್ಕಿಸದೆ ಜನರು ಸಂತೆಯಲ್ಲಿ ಗುಂಪುಗೂಡುತ್ತಿದ್ದಾರೆ. ಯಾವ ಅಧಿಕಾರಿಯೂ ಇತ್ತ ಗಮನ ಹರಿಸಿಲ್ಲ ಎಂದು ಸ್ಥಳೀಯರಾದ ಓಬಣ್ಣ ದೂರಿದ್ದಾರೆ.

ಸಂತೆ ನಡೆಯುತ್ತಿರುವ ವಿಷಯ ಇದೀಗ ಗಮನಕ್ಕೆ ಬಂದಿದ್ದು, ಪೊಲೀಸರನ್ನು ಸ್ಥಳಕ್ಕೆ ಕಳಿಸಿ ಸಂತೆ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಎಸ್. ಮಹಾಬಲೇಶ್ವರ ತಿಳಿಸಿದ್ದಾರೆ.
ಕೊರೊನಾ ಸೋಂಕು ಹರಡದಂತೆ ಸಂತೆಯನ್ನು ನಿಲ್ಲಿಸಲಾಗಿದೆ. ಈ ಬಗ್ಗೆ ಒಂದು ವಾರದಿಂದಲೇ ಡಂಗೂರು ಸಾರಿಸಿ ಜಾಗೃತಿ ಮೂಡಿಸಲಾಗಿದೆ. ಆದರೂ ಜನರು ಸಂತೆಯಲ್ಲಿ ಸೇರಿದ್ದು, ಅವರನ್ನು ಖಾಲಿ ಮಾಡಿಸಲು ಮುಂದಾಗಿದ್ದೇವೆ ಎಂದು ಮಾಕನಾಡಕು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಂ. ಪ್ರಶಾಂತ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು