ಹೊಸಪೇಟೆ: ತಾಲ್ಲೂಕಿನ ಬೈಲುವದ್ದಿಗೇರಿ ಗ್ರಾಮದ ಪುರಾತನ ಕೆರೆಗೆ ನೀರು ಹರಿಸುವಂತೆ ಕೆರೆ ಹೋರಾಟ ಸಮಿತಿ ಆಗ್ರಹಿಸಿದೆ.

ಈ ಸಂಬಂಧ ಸಮಿತಿಯ ಪದಾಧಿಕಾರಿಗಳು ಗುರುವಾರ ಜಿಂದಾಲ್‌ನ ರಾಜಶೇಖರ್ ಪಟ್ಟಣಶೆಟ್ಟಿ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.

‘ಕೆರೆಯಲ್ಲಿ ನೀರಿಲ್ಲದ ಕಾರಣ ಜನ, ಜಾನುವಾರುಗಳಿಗೆ ತೊಂದರೆಯಾಗುತ್ತಿದೆ. ಅಂತರ್ಜಲ ಮಟ್ಟ ಕುಸಿದಿದೆ. ಕೆರೆಯ ಪಕ್ಕದಿಂದ ಜಿಂದಾಲ್‌ಗೆ ಸೇರಿದ ಕುಡಿಯುವ ನೀರಿನ ಪೈಪ್‌ಲೈನ್ ಹಾದು ಹೋಗಿದೆ. ಅದರಿಂದ ಕೆರೆಗೆ ನೀರು ಹರಿಸಿದರೆ ಜನ, ಜಾನುವಾರುಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ’ ಎಂದು ತಿಳಿಸಿದ್ದಾರೆ.

ಜಿಂದಾಲ್‌ನ ಉಪಾಧ್ಯಕ್ಷ ಮಂಜುನಾಥ ಪ್ರಭು, ಸಮಿತಿ ಮುಖಂಡರಾದ ಕಿಚಿಡಿ ಕೊಟ್ರೇಶ್, ಬಿ.ಫಣೀಂದ್ರ ಗೌಡ, ಅನುವಾಳ ವಿಶ್ವನಾಥ ರೆಡ್ಡಿ, ಎ.ಗಂಗಾಧರಪ್ಪ, ಕಪ್ಪಗಲ್ ಸಿದ್ದಲಿಂಗಮೂರ್ತಿ, ಎತ್ತಿನಹಟ್ಟಿ ಯಂಕಪ್ಪ, ಕುಂಬಾರ ಸುಡುಗಾಡೆಪ್ಪ, ಓ.ಭೀಮರೆಡ್ಡಿ, ಬಳ್ಳಾರಿ ಲಕ್ಷ್ಮಿಪತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.