ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆಯ ವೈದ್ಯರ ಸನ್ಮಾನ

Last Updated 1 ಜುಲೈ 2019, 13:26 IST
ಅಕ್ಷರ ಗಾತ್ರ

ಹೊಸಪೇಟೆ: ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ಇನ್ನರ್‌ ವೀಲ್‌ ಕ್ಲಬ್‌ನಿಂದ ಸೋಮವಾರ ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೈದ್ಯರನ್ನು ಸನ್ಮಾನಿಸಲಾಯಿತು.

ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಲೀಂ, ವೈದ್ಯರಾದ ಸೋಮಶೇಖರ್‌, ಹರಿಪ್ರಸಾದ್‌, ಮಹಾಂತಪ್ಪ, ಲಕ್ಷ್ಮಿದೇವಿ, ಮೆಹಬೂಬ್‌ ಬಿ, ಶ್ರೀನಿವಾಸ್‌, ಆಶಾ ಕೋರಿ, ಅರುಣ್‌, ಇತ್ತೀಚೆಗೆ ಕೆಲಸದಿಂದ ನಿವೃತ್ತರಾದ ವೈದ್ಯ ಪ್ರಕಾಶ್‌ ರೆಡ್ಡಿ ಅವರನ್ನು ಕ್ಲಬ್‌ ಸದಸ್ಯರು ಸನ್ಮಾನಿಸಿದರು.

ಡಾ. ಸೋಮಶೇಖರ ಮಾತನಾಡಿ, ‘ಬಿ.ಸಿ. ರಾಯ್‌ ಅವರ ಸವಿನೆನಪಿನಲ್ಲಿ ವೈದ್ಯರ ದಿನ ಆಚರಿಸಲಾಗುತ್ತದೆ. ವೈದ್ಯರ ಜತೆಗೆ ಅವರು ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಿದ್ದರು. ಅಂದಿನಿಂದ ಪ್ರತಿವರ್ಷ ಉತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಗುರುತಿಸಿ ಸತ್ಕರಿಸಲಾಗುತ್ತದೆ’ ಎಂದು ಹೇಳಿದರು.

ನೂರು ಹಾಸಿಗೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಲೀಂ ಮಾತನಾಡಿ, ‘ಜೀವರಕ್ಷಕ ತರಬೇತಿಯನ್ನು ಎಲ್ಲ ಇನ್ನರ್‌ ವೀಲ್‌ ಕ್ಲಬ್‌ ಸದಸ್ಯರಿಗೆ ನೀಡಲಾಗುವುದು. ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆ. ಜನದಟ್ಟಣೆ ಸಂದರ್ಭದಲ್ಲಿ ಜನ ಸಹಕರಿಸಬೇಕು’ ಎಂದರು.

ಕ್ಲಬ್‌ ಅಧ್ಯಕ್ಷೆ ಅನ್ನಪೂರ್ಣಾರೆಡ್ಡಿ, ಕಾರ್ಯದರ್ಶಿ ರಜಿನಿ ಶ್ರೀನಿವಾಸ್‌,ಎನ್‌.ಎಸ್‌. ರೇವಣಸಿದ್ದಪ್ಪ, ಮೇಘನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT