ಗುರುವಾರ , ಮೇ 26, 2022
25 °C

ಹೊಸಪೇಟೆ: ಬೈಸಿಕಲ್‌ನಲ್ಲಿ ಅಪ್ಪು ಸಮಾಧಿ ಸ್ಥಳಕ್ಕೆ ತೆರಳಿ ಗೌರವ ಸಮರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ನಟ ದಿವಂಗತ ಪುನೀತ್ ರಾಜಕುಮಾರ್ ಸಮಾಧಿಗೆ ತೆರಳಿ ಗೌರವ ಸಲ್ಲಿಸಲು ನಗರದ ಯುವಕನೊಬ್ಬ ಮಂಗಳವಾರ ಬೈಸಿಕಲ್‌ ಮೇಲೆ ಬೆಂಗಳೂರಿಗೆ ಪಯಣ ಬೆಳೆಸಿದ.

ನಗರದ ತಳವಾರಕೇರಿ ನಿವಾಸಿ ಬೆಳಗೋಡ್ ಉಮೇಶ್, ಪುನೀತ್‌ ರಾಜಕುಮಾರ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಬೈಸಿಕಲ್‌ ಮೇಲೆ ಪ್ರಯಾಣ ಬೆಳೆಸಿದರು. ಉಮೇಶ್‌ ಅವರನ್ನು ಬೀಳ್ಕೊಡಲು ಅನೇಕ ಯುವಕರು ಸೇರಿದ್ದರು.

‘ಪುನೀತ್ ರಾಜಕುಮಾರ್ ಹೊಸಪೇಟೆಗೆ ಬಂದಾಗ ಭೇಟಿಯಾಗಲು ಆಗಿರಲಿಲ್ಲ. ಅವರ ನಿಧನದ ಸಮಯದಲ್ಲೂ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ಬೈಸಿಕಲ್‌ನಲ್ಲಿ ಅವರ ಸಮಾಧಿ ಸ್ಥಳಕ್ಕೆ ಹೋಗಿ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಿಸುತ್ತೇನೆ’ ಉಮೇಶ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು