ಗುರುವಾರ , ಜನವರಿ 23, 2020
22 °C

ಸಿಲಿಂಡರ್‌ ಸ್ಪೋಟ; ರೆಸ್ಟೊರೆಂಟ್‌ಗೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಸಮೀಪದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ವಸ್ತು ಸಂಗ್ರಹಾಲಯ ಬಳಿಯ ರೆಸ್ಟೊರೆಂಟ್‌ನಲ್ಲಿ ಶುಕ್ರವಾರ ಸಿಲಿಂಡರ್‌ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದರಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಮೊಹಮ್ಮದ್‌ ನಾಸಿರುದ್ದೀನ್‌ ಶಾ ಎಂಬುವರಿಗೆ ಈ ರೆಸ್ಟೊರೆಂಟ್‌ ಸೇರಿದೆ. ಬೆಂಕಿಯಿಂದ ಆಹಾರ ಸಾಮಗ್ರಿ, ಕುರ್ಚಿ, ಮೇಜು ಸೇರಿದಂತೆ ಇತರೆ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿವೆ. ಆದರೆ, ಯಾವುದೇ ಪ್ರಾಣ ಹಾನಿಯಾಗಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬಳಿಕ ಬೆಂಕಿ ಬೇರೆಡೆ ಚಾಚುವುದನ್ನು ನಿಯಂತ್ರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು