ಗುರುವಾರ , ಏಪ್ರಿಲ್ 15, 2021
30 °C

ಉಪಮಾರುಕಟ್ಟೆ ಅಭಿವೃದ್ದಿಗೆ ಅನುದಾನ: ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಟ್ಟೂರು: ಎಪಿಎಂಸಿಯಲ್ಲಿನ ₹ 90 ಲಕ್ಷ ಅನುದಾನದಲ್ಲಿ ಕೂಡ್ಲಿಗಿ ಮತ್ತು ಚಿಕ್ಕಜೋಗಿಹಳ್ಳಿ ಉಪಮಾರುಕಟ್ಟೆಗಳ ಅಭಿವೃದ್ದಿಗೂ ಹಣ ಮೀಸಲಿರಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಅಧ್ಯಕ್ಷ ಬಿ.ಮಾರುತಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸದಸ್ಯರ ತುರ್ತ ಸಭೆಯಲ್ಲಿ ಸದಸ್ಯರುಗಳಾದ ಕಾವಲಿ ಶಿವಪ್ಪ, ಯಲ್ಲಪ್ಪ, ಶರಣಪ್ಪ ಮಾತನಾಡಿ, ಅನುದಾನದ ಪೂರ್ಣ ಮೊತ್ತವನ್ನು ಕೊಟ್ಟೂರು ಮುಖ್ಯ ಮಾರುಕಟ್ಟೆ ವ್ಯಾಪ್ತಿಯಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಬಳಸಿಕೊಳ್ಳದೆ, ಸ್ವಲ್ಪ ಪ್ರಮಾಣದ ಅನುದಾನವನ್ನು ಕೂಡ್ಲಿಗಿ ಮತ್ತು ಚಿಕ್ಕಜೋಗಿಹಳ್ಳಿ ಉಪಮಾರುಕಟ್ಟೆಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.

ಅಧ್ಯಕ್ಷ ಬಿ.ಮಾರುತಿ, ಕಾರ್ಯದರ್ಶಿ ವೀರಣ್ಣ, ಕೊಟ್ಟೂರು ಎಪಿಎಂಸಿ ಪ್ರಾಂಗಣದಲ್ಲಿ ಅತೀ ಮುಖ್ಯವಾಗಿ ಕೆಲ ಯೋಜನೆಗಳನ್ನು ಕೈಗೊಳ್ಳಬೇಕಿದೆ. ಈ ಕಾರಣಕ್ಕಾಗಿ ಹೆಚ್ಚು ಅನುದಾನವನ್ನು ಇದಕ್ಕೆ ಬಳಸಿಕೊಳ್ಳಲು ಮುಂದಾಗಿದ್ದೇವೆ ಎಂದರು. ಕೊಟ್ಟೂರು ಮಾರುಕಟ್ಟೆಯಲ್ಲಿ ಹೂವು ಮತ್ತು ಬೆಣ್ಣೆ ಮಾರುಕಟ್ಟೆ ಸ್ಥಾಪಿಸಲು ಕ್ರಮ ಕೈಗೊಳ್ಳುವ ಸಂಬಂಧ ವಿವಿಧ ಮಾರುಕಟ್ಟೆಗಳ ಬಗ್ಗೆ ಅಧ್ಯಯನ ಮಾಡಿ ಮಾಹಿತಿ ಕಲೆ ಹಾಕುವಂತೆ ಕಾರ್ಯದರ್ಶಿ ವೀರಣ್ಣನವರಿಗೆ ಅಧ್ಯಕ್ಷ ಮಾರುತಿ ಸೂಚಿಸಿದರು.

ಕೊಟ್ಟೂರು ಎಪಿಎಂಸಿ ಗೆ ಗುಡೇಕೋಟೆ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಗೊಂಡ ಬಸವರಾಜ ಮತ್ತು ಸರ್ಕಾರದಿಂದ ನಾಮನಿರ್ದೇಶನಗೊಂಡ ಹರಾಳ್ ಬಸವನಗೌಡರನ್ನು ಅಧ್ಯಕ್ಷ ಬಿ.ಮಾರುತಿ, ಕಾರ್ಯದರ್ಶಿ ವೀರಣ್ಣ, ಸಹಕಾರ್ಯದರ್ಶಿ ಬಸವರಾಜ ಮತ್ತಿತರರು ಸನ್ಮಾನಿಸಿ ಸ್ವಾಗತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು