ಮಂಗಳವಾರ, ಮಾರ್ಚ್ 9, 2021
19 °C

ಮತದಾರರ ಪಟ್ಟಿಯಿಂದ ಹೆಸರು ಮಾಯ: ಮೃತರಾಗಿದ್ದು ತಂದೆ, ತೆಗೆದಿದ್ದು ಪುತ್ರನದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ಎಪಿಎಂಸಿ ಮಾಜಿ ಉಪಾಧ್ಯಕ್ಷ, ಹಾಲಿ ನಿರ್ದೇಶಕ ತಾಲ್ಲೂಕಿನ ವಲ್ಲಭಾಪುರ ಗ್ರಾಮದ ಬಿ.ಹುಲುಗಪ್ಪ ಮತಗಟ್ಟೆಗೆ ತೆರಳಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದಾರೆ. ಗುರುತಿನ ಚೀಟಿಯೊಂದಿಗೆ ತೆರಳಿದ್ದ ಅವರು ಮತಗಟ್ಟೆಯಲ್ಲಿ ಅಧಿಕಾರಿಗಳು  ನಿಮ್ಮ ಹೆಸರು ತೆಗೆಯಲಾಗಿದೆ ಎಂದು ಹೇಳಿದರು. 

ಈಚೆಗೆ ಹುಲುಗಪ್ಪ ಅವರ ತಂದೆ ಬಟಾರಿ ಹುಲುಗಪ್ಪ ಮೃತರಾಗಿದ್ದರು, ಆದರೆ ತಂದೆಯ ಬದಲಾಗಿ ಮಗನ ಹೆಸರನ್ನು ಡಿಲಿಟ್ ಮಾಡಲಾಗಿದೆ ಎಂದು ವಲ್ಲಭಾಪುರ ಬಿಎಲ್ಒ ರಾಮಪ್ಪ ತಿಳಿಸಿದರು. ಈ ಕುರಿತಂತೆ ತಾಲ್ಲೂಕು ಕಚೇರಿಗೆ ಮಾಹಿತಿ ನೀಡಲಾಗಿತ್ತು, ಆದರೂ ಬದುಕಿರುವವರ ಹೆಸರನ್ನು ತೆಗೆಯಲಾಗಿದೆ ಎಂದು ಮಾಹಿತಿ ನೀಡಿದರು.

ಹೊಸ ಗ್ರಾಮ ಪಂಚಾಯ್ತಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲು ತಾಲ್ಲೂಕು ಆಡಳಿತ ಮತದಾನ ಮಾಡುವುದಕ್ಕೆ ವಂಚಿತರನ್ನಾಗಿ ಮಾಡಿದೆ ಎಂದು ಮಾರುತೆಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಕೆಲಕಾಲ ಮತದಾನ ಕೇಂದ್ರದಲ್ಲಿ ಗೊಂದಲ‌ ಸೃಷ್ಟಿಯಾಗಿತ್ತು. ಮತದಾನಕ್ಕೆ ಅವಕಾಶ ಕಲ್ಪಿಸುವಂತೆ ಕೋರಿದರು.

ಗ್ರಾಮದ ತಾರಳ್ಳಿ ದ್ಯಾಮವ್ವ ಎನ್ನುವವರ ಹೆಸರನ್ನೂ ತೆಗೆಯಲಾಗಿದೆ. ಇವರ ಪತಿ ದುರುಗಪ್ಪ ನಿಧನರಾಗಿದ್ದರು. ಪತಿಯ ಬದಲಾಗಿ ಪತ್ನಿಯ ಹೆಸರನ್ನು ತೆಗೆಯಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು