ಬುಧವಾರ, ಡಿಸೆಂಬರ್ 2, 2020
17 °C
ಆಂಜನೇಯಲು ಅಧ್ಯಕ್ಷ, ಶರಭಣ್ಣ ಉಪಾಧ್ಯಕ್ಷ

ಕೆಎಪಿಸಿಎಂಎಸ್: ಅವಿರೋಧ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಂಪ್ಲಿ: ಕಂಪ್ಲಿ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ(ಕೆಎಪಿಸಿಎಂಎಸ್) ನೂತನ ಅಧ್ಯಕ್ಷರಾಗಿ ಎನ್. ಆಂಜನೇಯಲು ಮತ್ತು ಉಪಾಧ್ಯಕ್ಷರಾಗಿ ವಿ. ಶರಭಣ್ಣ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿ ಟಿ. ಕೃಷ್ಣನಾಯ್ಕ ಕಾರ್ಯನಿರ್ವಹಿಸಿದರು. ನಿರ್ದೇಶಕರಾದ ಬಿ. ರಮೇಶ್, ಎಸ್. ಮಾರೇಶ್, ಎಚ್.ಎಂ. ಪ್ರಭುಸ್ವಾಮಿ, ಪಿ. ಚಂದ್ರಕಲಾ, ಜಿ. ಯರಿಸ್ವಾಮಿ, ಮಾಳಾಪುರ ದೇವೇಂದ್ರಗೌಡ, ವಿ. ಪ್ರಸಾದರಾವ್, ಮಂಜುನಾಥ ಗುಬಾಜಿ, ಕೆ. ವಿರುಪಾಕ್ಷಪ್ಪ, ಟಿ.ಎಂ. ಸಾವಿತ್ರಿ, ಸೂರಶೆಟ್ಟಿ ಜಯಲಕ್ಷ್ಮಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಬಳಿಕ ನಡೆದ ಸನ್ಮಾನ ಸಮಾರಂಭದಲ್ಲಿ ಮಾಜಿ ಶಾಸಕ ಟಿ.ಎಚ್. ಸುರೇಶ್‍ಬಾಬು ಮಾತನಾಡಿ, ‘ಈ ಭಾಗದ ರೈತರ ಬೇಡಿಕೆಯಂತೆ ಪಟ್ಟಣದಲ್ಲಿ ಭತ್ತ ಖರೀದಿ ಕೇಂದ್ರ ಸರ್ಕಾರ ಆರಂಭಿಸಲಿದೆ’ ಎಂದು ತಿಳಿಸಿದರು.

ಸಹಕಾರ ಸಂಘದ ವ್ಯವಸ್ಥಾಪಕ ಸಿದ್ದೇಶ್, ಮುಖಂಡರಾದ ಅಳ್ಳಳ್ಳಿ ವೀರೇಶ್, ಪಿ. ಬ್ರಹ್ಮಯ್ಯ, ಜಿ. ಸುಧಾಕರ, ಬಿ. ಸಿದ್ದಪ್ಪ, ಕಡೆಮನಿ ಪಂಪಾಪತಿ, ಎನ್. ಪುರುಷೋತ್ತಮ, ಎನ್. ರಾಮಾಂಜನೇಯಲು, ಎಚ್. ಲಿಂಗನಗೌಡ, ಡಾ. ವೆಂಕಟೇಶ್ ಭರಮಕ್ಕನವರ್ ಮತ್ತಿತರರು ಹಾಜರಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು