ಸೋಮವಾರ, ಮಾರ್ಚ್ 8, 2021
25 °C

ಮಂದಿರಕ್ಕೆ ಮುಸ್ಲಿಮರಿಂದಲೂ ದೇಣಿಗೆ: ಸಮೀವುಲ್ಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ವೈಯಕ್ತಿಕವಾಗಿ ದೇಣಿಗೆ ಕೊಡುವೆ. ನಿಧಿ ಸಂಗ್ರಹಕ್ಕೆ ನಿಮ್ಮೊಂದಿಗೆ ಬರುವೆ. ಮುಸ್ಲಿಂ ಸಮಾಜದವರೊಂದಿಗೆ ಮಾತನಾಡಿ ಅವರಿಂದಲೂ ದೇಣಿಗೆ ಕೊಡಿಸಲು ಪ್ರಯತ್ನಿಸುವೆ’ ಎಂದು ಕಮಲಾಪುರ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸೈಯದ್‌ ಸಮೀವುಲ್ಲಾ ತಿಳಿಸಿದರು.

ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಸಮಿತಿಯು ಶುಕ್ರವಾರ ತಾಲ್ಲೂಕಿನ ಕಮಲಾಪುರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ವಾಲ್ಮೀಕಿ ಸಮಾಜದ ಮುಖಂಡ ನಾಗಯ್ಯ ಮಾತನಾಡಿ, ಎಲ್ಲ ಏಳು ಕೇರಿಗಳಿಗೆ ಹೋಗಿ ದೇಣಿಗೆ ಸಂಗ್ರಹಿಸಲಾಗುವುದು ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಳ್ಳಾರಿ ವಿಭಾಗ ಕಾರ್ಯವಾಹ ಕೇಶವಜೀ, ಪಟ್ಟಣ ಪಂಚಾಯತಿ ಸದಸ್ಯ ಗೋಪಾಲಕೃಷ್ಣ, ನಿಂಗಪ್ಪ, ಮಾಳಗಿ ರಾಮಸ್ವಾಮಿ, ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ, ನಿಧಿ ಪ್ರಮುಖ‌ ಯಲ್ಲಪ್ಪ, ವೆಂಕಟೇಶ್, ಗುರುಬಸವನಗೌಡ, ರಂಗಸ್ವಾಮಿ, ಈರಣ್ಣಾ ಪೂಜಾರ್, ರಾಚಯ್ಯ, ಖಾಜಾ ಹುಸೇನ್, ರಾಜು, ಯಲ್ಲಪ್ಪ, ತಿಪ್ಪೇಸ್ವಾಮಿ, ಯರಿಸ್ವಾಮಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು