ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಸೋಮಶೇಖರ ರೆಡ್ಡಿ ಬಂಧನಕ್ಕೆ ಆಗ್ರಹ

Last Updated 5 ಜನವರಿ 2020, 9:57 IST
ಅಕ್ಷರ ಗಾತ್ರ

ಬಳ್ಳಾರಿ: ನಿರ್ದಿಷ್ಟ ಸಮುದಾಯದವರನ್ನು ಗುರುತಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ ಶಾಸಕ ಸೋಮಶೇಖರ ರೆಡ್ಡಿ ಅವರನ್ನು ಸೆಕ್ಷನ್ 153ಎ, 295ಎ ಮತ್ತು 499 ಅಡಿ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.

ಜ.6ರಂದು ಬೆಳಿಗ್ಗೆ ನಿಯೋಗ ತೆರಳಿ ಒಂದು ಸಮುದಾಯದ ಬಗ್ಗೆ ಹೀನಾಯವಾಗಿ ಮಾತನಾಡಿದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಒಂದು ಕೋಮಿನವರನ್ನು ಹಿಡಿದು ಅವಹೇಳನಕಾರಿ ಭಾಷಣ ಮಾಡಿರುವುದು ಸರಿಯಲ್ಲ. ಈ ದೇಶ ಅವರ ಆಸ್ತಿಯಲ್ಲ. ಮುಸ್ಲಿಮರು 700-800 ವರ್ಷದಿಂದ ಇಲ್ಲಿದ್ದಾರೆ ಎಂದು‌ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಹೇಳಿದರು.

ಪಂಚರ್ ಹಾಕುವವರು ಬಸವಣ್ಣನ ಮಾತಿನಂತೆ ಕಾಯಕವೇ ಕೈಲಾಸ ಎಂಬಂತಿದ್ದಾರೆ‌. ಅವರೇನು ಲೂಟಿ ಮಾಡಿಲ್ಲ‌. ತಮ್ಮ ಜೀವನವನ್ನು ಗೌರವಯುತವಾಗಿ ನಡೆಸುತ್ತಿದ್ದಾರೆ. ಮುಸ್ಲಿಮರನ್ನು ಶಾಸಕರನ್ನಾಗಿ ಆಯ್ಕೆ ಮಾಡುವಷ್ಟು ಅನ್ಯೋನ್ಯತೆ ಜಿಲ್ಲೆಯಲ್ಲಿ ಇದೆ‌‌ಎಂದು ಅಲ್ಲಂ ವೀರಭದ್ರಪ್ಪ ಹೇಳಿದರು‌.

ಅವರ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸಬೇಕು. ಕಾಂಗ್ರೆಸ್ ಬೇಕೂಫ್ ಆದರೆ, ಎನ್.ಡಿ.ಎ ಅಲೈನ್ಸ್ ನಲ್ಲಿರುವವರು ಸಿಎಎ ಎನ್ಆರ್ಸಿ ವಿರೋಧಿಸುತ್ತಿದ್ದಾರೆ‌. ಮತ್ತು ಬೀದಿಗಿಳಿದು ಹೋರಾಟ ಮಾಡುತ್ತಿರುವವರು ಎಲ್ಲರೂ ಬೇವಕೂಫ್ ಗಳಾ? ಎಂದು ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಪ್ರಶ್ನಿಸಿದರು.

ಮುಖಂಡ ಆಂಜನೇಯುಲು, ಸೂರ್ಯನಾರಾಯಣರೆಡ್ಡಿ, .ಎಸ್‌ಸ್ವಾಮಿ, ಮಾರೆಣ್ಣ ಇತರರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT