ಮಂಗಳವಾರ, ಅಕ್ಟೋಬರ್ 27, 2020
29 °C

ಆಸ್ತಿ ವಿವಾದ: ಮೂರು ಕುಟುಂಬಗಳ ಸದಸ್ಯರ ಬಡಿದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ತಾಲ್ಲೂಕಿನ ಯರಗುಡಿ ಗ್ರಾಮದಲ್ಲಿ ಆಸ್ತಿ ವಿವಾದ ತಾರಕಕ್ಕೇರಿ ಮೂವರು ಸಹೋದರರ ಕುಟುಂಬಗಳ ಸದಸ್ಯರು ಗುರುವಾರ ಬಡಿಗೆಗಳನ್ನು ಹಿಡಿದು ಬಡಿದಾಟ ನಡೆಸಿದ್ದಾರೆ.

ಮೂವರು ಅಣ್ಣ ತಮ್ಮಂದಿರಲ್ಲಿ ಇಬ್ಬರು ಮತ್ತು ಒಬ್ಬರು ಸಹೋದರರ ನಡುವೆ ವಿವಾದ ಹಲವು ವರ್ಷಗಳಿಂದ ಇತ್ಯರ್ಥವಾಗದೇ ಆಗಾಗ ಜಗಳ ನಡೆಯುತ್ತಿತ್ತು. ಗುರುವಾರ ಕಲಹ ವಿಕೋಪಕ್ಕೇರಿ ಎರಡು ಗುಂಪುಗಳ ಮಂದಿ ಬಡಿಗೆಗಳೊಂದಿಗೆ ಹೊಡೆದಾಟ ನಡೆಸಿದ ವೀಡಿಯೊ ವೈರಲ್ ಆಗಿದೆ.

ಹೊನ್ನಾರೆಡ್ಡಿ, ಕೃಷ್ಣಾ ರೆಡ್ಡಿ ಮತ್ತು ಶೇಷರೆಡ್ಡಿ ಕುಟುಂಬಗಳ ಸದಸ್ಯರ ಮಧ್ಯೆ ಈ ಬಡಿದಾಡ ನಡೆದಿದ್ದು, ಮೂವರ ಪೈಕಿ ಇಬ್ಬರು ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಈಗ ಹೊನ್ನಾರೆಡ್ಡಿ ಮಾತ್ರ ಇದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು