ಸೋಮವಾರ, ಏಪ್ರಿಲ್ 12, 2021
30 °C

ಮತ್ತಿಬ್ಬರಿಗೆ ಕೋವಿಡ್‌ ದೃಢ, ರೈಲ್ವೆ ಚಾಲಕರ ವಿಶ್ರಾಂತಿ ಗೃಹ ಸೀಲ್‌ಡೌನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯನಗರ (ಹೊಸಪೇಟೆ): ನಗರದ ರೈಲು ನಿಲ್ದಾಣದ ನೌಕರರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಇನ್ನಿಬ್ಬರಲ್ಲಿ ಶುಕ್ರವಾರ ಕೋವಿಡ್‌–19 ದೃಢಪಟ್ಟಿದೆ.

ಇದರಿಂದಾಗಿ ರೈಲ್ವೆಯಲ್ಲಿ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಗುರುವಾರ ಇಬ್ಬರಲ್ಲಿ ಸೋಂಕಿರುವುದು ಖಚಿತವಾಗಿತ್ತು.

ಮಂಗಳವಾರ (ಮಾ.9) ರೈಲ್ವೆ ಇಲಾಖೆಯ 18 ಜನ ನೌಕರರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಇವರ ಸಂಪರ್ಕಕ್ಕೆ ಬಂದಿದ್ದ 90 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 11 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು.

ದಿನೇ ದಿನೇ ರೈಲ್ವೆ ನೌಕರರಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಈಗಾಗಲೇ ರೈಲು ನಿಲ್ದಾಣವನ್ನು ಹಾಟ್‌ಸ್ಪಾಟ್‌ ಆಗಿ ಘೋಷಿಸಲಾಗಿದೆ.

ಹೆಚ್ಚಿನ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದರಿಂದ ನಗರದ ರೈಲು ನಿಲ್ದಾಣವನ್ನು ಹಾಟ್‌ಸ್ಪಾಟ್‌ ಆಗಿ ಘೋಷಿಸಲಾಗಿದೆ. ನಿಲ್ದಾಣದ ಚಾಲಕರು ಮತ್ತು ಗಾರ್ಡ್‌ ವಿಶ್ರಾಂತಿ ಗೃಹವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು