‘ಪ್ರಯಾಣಿಕ ವಾಹನದಲ್ಲಿ ಸರಕು ಸಾಗಣೆ ನಿರ್ಬಂಧಿಸಿ‘

ಭಾನುವಾರ, ಜೂಲೈ 21, 2019
27 °C

‘ಪ್ರಯಾಣಿಕ ವಾಹನದಲ್ಲಿ ಸರಕು ಸಾಗಣೆ ನಿರ್ಬಂಧಿಸಿ‘

Published:
Updated:
Prajavani

ಹೊಸಪೇಟೆ: ಪ್ರಯಾಣಿಕರ ವಾಹನದಲ್ಲಿ ಸರಕು ಸಾಗಣೆ ಮಾಡುವುದನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ಲಘು ವಾಹನಗಳ ಚಾಲಕರ ಸಂಘದವರು ಸೋಮವಾರ ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಂತರ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

‘ನಗರದಲ್ಲಿ ಐದು ನೂರಕ್ಕೂ ಹೆಚ್ಚು ಸರಕು ಸಾಗಣೆ ವಾಹನಗಳಿವೆ. ಹೀಗಾಗಿ ಕೆಲವೊಮ್ಮೆ ಬಾಡಿಗೆಯೇ ಸಿಗುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಪ್ರಯಾಣಿಕ ವಾಹನಗಳು ಸರಕು ಸಾಗಿಸುತ್ತೇವೆ. ಇದರಿಂದ ನಮಗೆ ತೊಂದರೆ ಉಂಟಾಗುತ್ತಿದೆ. ಸಂಸಾರ ನಡೆಸಲು ಆಗುತ್ತಿಲ್ಲ. ನಿಯಮದಂತೆ ಯಾರು ಯಾವ ಉದ್ದೇಶಕ್ಕಾಗಿ ವಾಹನ ಓಡಿಸಲು ಅನುಮತಿ ಪಡೆದುಕೊಂಡಿದ್ದಾರೋ ಅದರಂತೆ ನಡೆಸಬೇಕು. ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಬೇಕು. ಜತೆಗೆ ಸರಕು ಸಾಗಣೆ ವಾಹನಗಳಿಗೆ ನಗರದಲ್ಲಿ ಅಧಿಕೃತ ನಿಲ್ದಾಣ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.

ಸಂಘದ ತಾಲ್ಲೂಕು ಅಧ್ಯಕ್ಷ ಹುಚ್ಚಪ್ಪ, ಪ್ರಧಾನ ಕಾರ್ಯದರ್ಶಿ ಸಿ. ಕೃಷ್ಣ ಹಾಗೂ ಚಾಲಕರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !