ಬೆಂಗಳೂರು: ನಗರದಲ್ಲಿರುವ ಅರ್ಧದಷ್ಟು ಬೀದಿನಾಯಿಗಳಿಗೆ ಮೈಕ್ರೊ ಚಿಪ್ ಅಳವಡಿಸಲು ಬಿಬಿಎಂಪಿ ಮುಂದಾಗಿದೆ.

ನಗರದಲ್ಲಿ 2.79 ಲಕ್ಷ ಬೀದಿನಾಯಿಗಳಿದ್ದು, 1,84,671 ಬೀದಿನಾಯಿಗಳಿಗೆ ಮೈಕ್ರೊ ಚಿಪ್‌ಗಳನ್ನು 90 ದಿನದಲ್ಲಿ ಅಳವಡಿಸಲು ಟೆಂಡರ್ ಕರೆಯಲಾಗಿದೆ. ಸುಮಾರು ₹58 ಲಕ್ಷ ವೆಚ್ಚ ಮಾಡಲು ನಿರ್ಧರಿಸಲಾಗಿದೆ.

‘ಫೈವ್ ಇನ್ ಒನ್’ ಲಸಿಕೆಗಳನ್ನು ಮೊದಲ ಬಾರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳಿಗೆ ನೀಡಲಾಗುತ್ತಿದೆ. ಕೋರೆಹಲ್ಲು ರೋಗ ಸೇರಿದಂತೆ ಹಲವು ರೋಗಗಳಿಂದ ಬೀದಿ ನಾಯಿಗಳಿಗೆ ರಕ್ಷಣೆ ನೀಡಲು ಏಪ್ರಿಲ್‌ನಲ್ಲಿ ಲಸಿಕೆ ನೀಡುವ ಅಭಿಯಾನ ಆರಂಭವಾಗಿದೆ. ಲಸಿಕೆ ಖರೀದಿಗೂ ಟೆಂಡರ್ ಆಹ್ವಾನಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

2019ರ ನಂತರ 2023ರ ಜುಲೈ 11ರಿಂದ ಆಗಸ್ಟ್ 2ರವರೆಗೆ ನಡೆದ ಬೀದಿ ನಾಯಿ ಸಮೀಕ್ಷೆಗಳ ವರದಿಯನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಸಂದರ್ಭದಲ್ಲಿ ಮೈಕ್ರೊ ಚಿಪ್ ಅಳವಡಿಸುವ ಹಾಗೂ ಲಸಿಕೆ ನೀಡುವ ಯೋಜನೆಯನ್ನು ಪ್ರಕಟಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.