ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ವಾಸ: ಪಾಕ್‌ ಸೇನೆ ಸುಪರ್ದಿಗೆ ಯುವತಿ

Last Updated 20 ಫೆಬ್ರುವರಿ 2023, 23:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದಡಿ ಇತ್ತೀಚೆಗೆ ಬಂಧಿಸಲಾಗಿದ್ದ ಪಾಕಿಸ್ತಾನದ ಯುವತಿ ಇಕ್ರಾ ಜೀವನಿ (19) ಅವರನ್ನು ಗಡಿಪಾರು ಮಾಡಿರುವ ಪೊಲೀಸರು, ಪಾಕ್ ಸೇನೆ ಸುಪರ್ದಿಗೆ ಭಾನುವಾರ ಒಪ್ಪಿಸಿದ್ದಾರೆ.

ಉತ್ತರ ಪ್ರದೇಶದ ಮುಲಾಯಂ ಸಿಂಗ್ (25) ಜೊತೆ ಬೆಂಗಳೂರಿಗೆ ಬಂದಿದ್ದ ಇಕ್ರಾ, ಜುನ್ನಸಂದ್ರ ಅಯ್ಯಪ್ಪಸ್ವಾಮಿ ದೇವಸ್ಥಾನ ಬಳಿಯ ಮನೆಯಲ್ಲಿ ವಾಸವಿದ್ದರು. ಈಕೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಕೇಂದ್ರ ಗುಪ್ತದಳ ಅಧಿಕಾರಿಗಳು, ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ಸೂಚಿಸಿದ್ದರು.

ಮನೆ ಮೇಲೆ ದಾಳಿ ಮಾಡಿದ್ದ ಬೆಳ್ಳಂದೂರು ಠಾಣೆ ಪೊಲೀಸರು, ಇಕ್ರಾ ಹಾಗೂ ಮುಲಾಯಂಸಿಂಗ್‌ ಅವರನ್ನು ಬಂಧಿಸಿದ್ದರು. ಮನೆ ಮಾಲೀಕ ಗೋವಿಂದರೆಡ್ಡಿ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದರು.

‘ಇಕ್ರಾ ಅವರನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಸುಪರ್ದಿಗೆ ಒಪ್ಪಿಸಲಾಗಿತ್ತು. ಪಾಕಿಸ್ತಾನ ಪ್ರಜೆ ಎಂಬುದು ಸಾಬೀತಾಗುತ್ತಿದ್ದಂತೆ, ಇಕ್ರಾ ಅವರನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗಿತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಪ್ರಕರಣದ ತನಿಖಾಧಿಕಾರಿ ರಾಕೇಶ್ ನೇತೃತ್ವದ ತಂಡ ಬೆಂಗಳೂರಿನಿಂದ ಪಂಜಾಬ್‌ನ ವಾಘಾ–ಅಠಾರಿ ಗಡಿಗೆ ಇಕ್ರಾ ಅವರನ್ನು ಇತ್ತೀಚೆಗೆ ಕರೆದೊಯ್ದಿತ್ತು. ಭಾರತ ಹಾಗೂ ಪಾಕಿಸ್ತಾನ ಸೇನೆ ಅಧಿಕಾರಿಗಳ ಸಮ್ಮುಖದಲ್ಲಿ ದಾಖಲೆಗಳ ಪರಿಶೀಲನೆ ಮುಗಿದಿದೆ. ಇಕ್ರಾ ಅವರನ್ನು ಸುರಕ್ಷಿತವಾಗಿ ಪಾಕ್‌ ಸೇನೆ ಸುಪರ್ದಿಗೆ ಒಪ್ಪಿಸಲಾಗಿದೆ. ವಿಶೇಷ ತಂಡ ನಗರಕ್ಕೆ ವಾಪಸು ಬರುತ್ತಿದೆ’ ಎಂದೂ ತಿಳಿಸಿದರು.

ಡೇಟಿಂಗ್ ಆ್ಯಪ್ ಸ್ನೇಹ: ‘ಇಕ್ರಾ ಹಾಗೂ ಮುಲಾಯಂಸಿಂಗ್, ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು. ಮುಲಾಯಂ ಸಿಂಗ್‌ ಅವರನ್ನು ಮದುವೆ ಆಗುವ ಉದ್ದೇಶದಿಂದ 2022ರಲ್ಲಿ ನೇಪಾಳದ ಗಡಿ ಮೂಲಕ ಇಕ್ರಾ ದೇಶದೊಳಗೆ ನುಸುಳಿದ್ದರು. ಮದುವೆಯಾಗಿರುವುದಾಗಿ ಹೇಳುತ್ತಿದ್ದ ದಂಪತಿ, ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಉಳಿದುಕೊಂಡಿದ್ದರು’ ಎಂದು ಪೊಲೀಸ್ ಅಧಿಕಾರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT