ಬೆಂಗಳೂರು: ತಾನೇ ಪರಿಚಯಿಸಿದ್ದ ಸ್ನೇಹಿತೆ, ತನ್ನ ಪ್ರಿಯಕರನ ಜತೆಗೆ ಸಲುಗೆಯಿಂದ ಇರುವುದನ್ನು ಕಂಡು ವಿವಾಹಿತ ಮಹಿಳೆಯೊಬ್ಬರು ಹೌಸಿಂಗ್ ಬೋರ್ಡ್ನ ಪಾಪಯ್ಯ ಗಾರ್ಡನ್ನಲ್ಲಿರುವ ಒಯೊ ಕಂಫರ್ಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾಮಾಕ್ಷಿಪಾಳ್ಯ ನಿವಾಸಿ ಯಶೋದ (38) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ರಸ್ತೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆತಹತ್ಯೆ ಮಾಡಿಕೊಂಡಿರುವ ಯಶೋದ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಯಶೋದ ಅವರು ಲೆಕ್ಕ ಪರಿಶೋಧಕ ವಿಶ್ವನಾಥ್ ಎಂಬುವವರ ಜತೆಗೆ ಸಲುಗೆಯಿಂದ ಇದ್ದರು. ಈ ವಿಚಾರವನ್ನು ತನ್ನ ಗೆಳತಿಗೆ ತಿಳಿಸಿ ಪರಿಚಯಿಸಿದ್ದರು ಎಂದು ಮೂಲಗಳು ಹೇಳಿವೆ.

ಕೆಲವು ದಿನಗಳ ನಂತರ ಯಶೋದ ಅವರಿಂದ ವಿಶ್ವನಾಥ್ ಅಂತರ ಕಾಯ್ದುಕೊಂಡಿದ್ದರು. ಇದರಿಂದ ಅನುಮಾನಗೊಂಡಿದ್ದ ಯಶೋದ ಅವರು ತಾನೇ ಪರಿಚಯ ಮಾಡಿಸಿದ್ದ ಸ್ನೆಹಿತೆ, ವಿಶ್ವನಾಥ್ ಅವರೊಂದಿಗೆ ಓಡಾಟ ನಡೆಸುತ್ತಿರುವುದು ಗೊತ್ತಾಗಿತ್ತು. ಗುರುವಾರ ರಾತ್ರಿ 7.30ಕ್ಕೆ ವಿಶ್ವನಾಥ್ ಹಾಗೂ ತನ್ನ ಸ್ನೇಹಿತೆ ಹೌಸಿಂಗ್ ಬೋರ್ಡ್ನಲ್ಲಿರುವ ಲಾಡ್ಜ್ವೊಂದಕ್ಕೆ ಹೋಗಿರುವ ಮಾಹಿತಿ ತಿಳಿದು ಅಲ್ಲಿಗೆ ತೆರಳಿದ್ದರು. ಇಬ್ಬರೂ ಒಟ್ಟಿಗೆ ಇರುವುದನ್ನು ಗಮನಿಸಿ ಗಲಾಟೆ ಮಾಡಿದ್ದರು. ಇದಾದ ನಂತರ ಈಕೆಯ ಸ್ನೇಹಿತೆ ಅಲ್ಲಿಂದ ತೆರಳಿದ್ದರು. ನಂತರ ವಿಶ್ವನಾಥ್ ಅವರು ವಾಸ್ತವ್ಯ ಮಾಡಿದ್ದ ಕೊಠಡಿಯ ಪಕ್ಕದ ಕೊಠಡಿಯನ್ನು ಬುಕ್ ಮಾಡಿಕೊಂಡು ಯಶೋದ ಉಳಿದುಕೊಂಡಿದ್ದರು. ವಿಶ್ವನಾಥ್ ಅವರ ಜತೆಗೆ ಜಗಳ ಮಾಡಿಕೊಂಡು ರಾತ್ರಿ ಫ್ಯಾನ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.