ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸಂಬಳ ನೀಡದಿದ್ದಕ್ಕೆ ಮಾಲೀಕನ ಬೈಕ್ ಕದ್ದ ವ್ಯಕ್ತಿ

Published 4 ಮೇ 2024, 15:12 IST
Last Updated 4 ಮೇ 2024, 15:12 IST
ಅಕ್ಷರ ಗಾತ್ರ

ಬೆಂಗಳೂರು: ಸಂಬಳ ನೀಡಲಿಲ್ಲ ಎಂದು ಕೆಲಸ ಮಾಡುತ್ತಿದ್ದ ಹೋಟೆಲ್‌ ಮಾಲೀಕನ ದ್ವಿಚಕ್ರ ವಾಹನ ಕಳವು ಮಾಡಿ ಕೇರಳಕ್ಕೆ ಪರಾರಿಯಾಗಿದ್ದ ಅಖೀಬ್ ಖಾನ್ (23) ಎಂಬಾತನನ್ನು ಮಡಿವಾಳ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಕೇರಳ ಮೂಲದ ಅಖೀಬ್‌ ಖಾನ್ ಠಾಣೆ ವ್ಯಾಪ್ತಿಯ ಹೋಟೆಲ್‌ವೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಹೋಟೆಲ್ ಮಾಲೀಕರು ಸಂಬಳ ನೀಡಿಲ್ಲ ಎಂದು ಸಿಟ್ಟಿಗೆದ್ದ ಬೈಕ್‌ ಕದ್ದಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಹೆಚ್ಚುವರಿ ಕೆಲಸ ಮತ್ತು ಪ್ರತಿ ತಿಂಗಳು ಸಂಬಳ ನೀಡಲೂ ವಿಳಂಬದಿಂದ  ಬೇಸತ್ತಿದ್ದ ಅಖೀಬ್‌, ಯೂಟ್ಯೂಬ್‌ ನೋಡಿ ಬೈಕ್ ಲಾಕ್ ತೆರೆಯುವುದು ಹೇಗೆ? ಎಂದು ತಿಳಿದುಕೊಂಡಿದ್ದ. ಹೋಟೆಲ್‌ನ ಬಳಿ ನಿಲ್ಲಿಸಿದ್ದ ಮಾಲೀಕನ ಬೈಕ್‌ ಕದ್ದುಕೊಂಡು ಕೇರಳಕ್ಕೆ ಪರಾರಿಯಾಗಿದ್ದ. ಬೈಕ್ ಕಳ್ಳತನ ಬಗ್ಗೆ ಮಾಲೀಕ ದೂರು ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಬೈಕ್ ಕದ್ದುಕೊಂಡು ಬಂದಿರುವುದಾಗಿ ತಂದೆ–ತಾಯಿಗೆ ಆರೋಪಿ ತಿಳಿಸಿದ್ದ. ತಂದೆ–ತಾಯಿ ಬೈದು, ‘ಕಳ್ಳತನ ತಪ್ಪು. ವಾಪಸು ಹೋಗು’ ಎಂದಿದ್ದರು. ಆಗ ಬೆಂಗಳೂರಿನತ್ತ ಮರಳುತ್ತಿದ್ದ ಆರೋಪಿಯನ್ನು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT