ಮೆಟ್ರೊದೊಳಗೆ ಕ್ಯಾಮೆರಾ ಒಯ್ಯಲು ಆಧಾರ್‌ ಕಡ್ಡಾಯ?

7
METRO

ಮೆಟ್ರೊದೊಳಗೆ ಕ್ಯಾಮೆರಾ ಒಯ್ಯಲು ಆಧಾರ್‌ ಕಡ್ಡಾಯ?

Published:
Updated:
Metro Train

ಬೆಂಗಳೂರು: ಕ್ಯಾಮೆರಾ ಹೊಂದಿರುವವರು ಮೆಟ್ರೊ ರೈಲಿನಲ್ಲಿ ಪ್ರಯಾಣಿಸಬೇಕಾದರೆ ಆಧಾರ್‌ ವಿವರ ಹಾಗೂ ಮೊಬೈಲ್‌ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. 

ಈಗಾಗಲೇ ಇರುವ ಭದ್ರತಾ ತಪಾಸಣೆ ಜತೆಗೆ ಆಧಾರ್‌, ಮೊಬೈಲ್‌ ಸಂಖ್ಯೆಯನ್ನೂ ಕೇಳುತ್ತಿರುವುದು ಕ್ಯಾಮೆರಾ ಒಯ್ಯುವ ಪ್ರಯಾಣಿಕರಿಗೆ ಅಚ್ಚರಿ ಮೂಡಿಸಿದೆ. ಈ ವಿವರ ಪಡೆಯುವುದು ಕಡ್ಡಾಯ ಅಲ್ಲದಿದ್ದರೂ ವಿಜಯನಗರ, ವಿಧಾನಸೌಧ, ಬೈಯಪ್ಪನಹಳ್ಳಿ, ಮಲ್ಲೇಶ್ವರ, ಯಶವಂತಪುರ, ಮೆಜೆಸ್ಟಿಕ್ ಮೈಸೂರು ರಸ್ತೆ ಮತ್ತು ಇಂದಿರಾನಗರ ನಿಲ್ದಾಣಗಳಲ್ಲಿ ಇದನ್ನು ಆದೇಶದಂತೆ ಪಾಲಿಸಲಾಗುತ್ತಿದೆ. ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. 

‘ಯಾರಾದರೂ ಮದ್ಯ, ಆಯುಧ, ಉರಿಯುವ ವಸ್ತುಗಳನ್ನು ಒಯ್ಯಬೇಕಾದರೆ ಅವರ ಹೆಸರು ವಿಳಾಸ, ಮೊಬೈಲ್‌ ಸಂಖ್ಯೆ ನಮೂದಿಸಿಕೊಳ್ಳಲಿ. ಆದರೆ, ಕ್ಯಾಮೆರಾಗಳಿಗೆ ಈ ನಿಯಮ ಸರಿಯಲ್ಲ. ಕ್ಯಾಮೆರಾ ಈಗ ಎಲ್ಲರ ಬಳಿಯೂ ಇದೆ. ಅದೊಂದು ಸಾಮಾನ್ಯ ವಸ್ತುವಾಗಿಬಿಟ್ಟಿದೆ’ ಎಂದು ಪ್ರಯಾಣಿಕರಾದ ಪೂನಂ ಕೆ. ಹೇಳಿದರು. 

ಹಲವರು ಮೆಟ್ರೊ ರೈಲಿನೊಳಗೆ ಮೊಬೈಲ್‌ ಕ್ಯಾಮೆರಾ ಬಳಸಿ ಫೋಟೋ ತೆಗೆಯುತ್ತಾರೆ. ಅದಕ್ಕೆ ಸಹ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಿದೆ. ಅದಕ್ಕಾಗಿ ಛಾಯಾಚಿತ್ರ ತೆಗೆದವರ ಹೆಸರು ಮೊಬೈಲ್‌ ಸಂಖ್ಯೆಯನ್ನು ಬರೆದುಕೊಳ್ಳುತ್ತೇವೆ. ಆಧಾರ್‌ ಸಂಖ್ಯೆ ಪಡೆದುಕೊಳ್ಳಲು ಯಾವುದೇ ಸೂಚನೆ ನೀಡಿಲ್ಲ. ಹಾಗೇನಾದರೂ ಇದ್ದರೆ ಪರಿಶೀಲಿಸುವುದಾಗಿ ಮೆಟ್ರೊ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತರಾವ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !