ಬೆಂಗಳೂರು: ಪದೇ ಪದೇ ಅಪರಾಧಗಳಲ್ಲಿ ತೊಡಗುವ ಎಂಒಬಿಗಳ (ಅಪರಾಧ ಹಿನ್ನೆಲೆಯುಳ್ಳವರು) ಮನೆಗಳ ಮೇಲೆ ನಗರ ಪೊಲೀಸರು ಗುರುವಾರ ದಿಢೀರ್ ದಾಳಿ ಮಾಡಿದರು.

ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸರಗಳವು, ಮನೆಗಳವು ಹಾಗೂ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದೆ. ಅದರ ತಡೆಗೆ ಮುಂದಾಗಿರುವ ನಗರ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್, ಅಪರಾಧ ಹಿನ್ನೆಲೆಯುಳ್ಳವರ ಮೇಲೆ ಕಣ್ಣಿಡುವಂತೆ ಎಂಟು ವಿಭಾಗದ ಡಿಸಿಪಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಅದರನ್ವಯ ಡಿಸಿಪಿ ನೇತೃತ್ವದಲ್ಲಿ ಪೊಲೀಸರು,ಗುರುವಾರ ನಸುಕಿನಿಂದಲೇ ಎಂಒಬಿಗಳ ಮನೆ ಮೇಲೆ ದಾಳಿ ಮಾಡಿದರು. ಎಂಒಬಿಗಳು ಹಾಗೂ ಅವರ ಕುಟುಂಬದವರಿಂದ ಹೇಳಿಕೆ ಪಡೆದುಕೊಂಡರು. ಅಪರಾಧ ಕೃತ್ಯಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದರು.

ಪ್ರತ್ಯೇಕ ಪಟ್ಟಿ ಸಿದ್ಧ: ಕೆಲ ಎಂಒಬಿಗಳ ಹೆಸರು ಹಲವು ಪ್ರಕರಣಗಳಲ್ಲಿ ಪದೇ ಪದೇ ಕೇಳಿಬರುತ್ತಿದೆ. ಅಂಥವರ ಪ್ರತ್ಯೇಕ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸಿದ್ದಾರೆ.

‘ನಗರದ ಪ್ರತಿಯೊಂದು ಠಾಣೆ ವ್ಯಾಪ್ತಿಯಲ್ಲಿ ಎಂಒಬಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಅವರೆಲ್ಲರ ಮೇಲೂ ಕಣ್ಣಿಡುವಂತೆ ಠಾಣಾಧಿಕಾರಿ ಹಾಗೂ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.