ಭಾನುವಾರ, ಜೂನ್ 26, 2022
22 °C

ಎಸಿಬಿ ಬಲೆಗೆ ಇನ್‌ಸ್ಪೆಕ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ಯಾಸ್ ಪೈಪ್‌ಲೈನ್ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರಿಂದ ₹20 ಸಾವಿರ ಲಂಚ ಪಡೆಯುತ್ತಿದ್ದ ಚಿಕ್ಕಜಾಲ ಸಂಚಾರ ಠಾಣೆಯ ಇನ್‌‌ಸ್ಪೆಕ್ಟರ್ ಹಂಸವೇಣಿ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ಜಕ್ಕೂರು ವಾರ್ಡ್‌ನ ಟೆಲಿಕಾಂ ಲೇಔಟ್‌ನಲ್ಲಿ ನೆಲದಡಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಿರ್ವಹಿಸುವ ಗುತ್ತಿಗೆಯನ್ನು ಶ್ರೀರಾಮಪುರ ನಿವಾಸಿ ಪಡೆದುಕೊಂಡಿದ್ದರು. ಆರಂಭಿಸಿದ್ದ ಕಾಮಗಾರಿ ನಿಲ್ಲಿಸಲು ತಿಳಿಸಿದ್ದ ಇನ್‌ಸ್ಪೆಕ್ಟರ್ ಹಂಸವೇಣಿ, ಕಾಮಗಾರಿ ಗುತ್ತಿಗೆ ಪಡೆದಿರುವ ಬಗ್ಗೆ ದಾಖಲೆಗಳನ್ನು ಸಲ್ಲಿಸಲು ಸೂಚಿಸಿದ್ದರು.

ದಾಖಲೆಗಳನ್ನು ಸಲ್ಲಿಸಿದಾಗ ಕಾಮಗಾರಿ ಮುಂದುವರಿಸಲು ಒಟ್ಟಾರೆ ₹50 ಸಾವಿರ ಲಂಚ ನೀಡುವಂತೆ ಅದೇ ಠಾಣೆಯ ಸಿಬ್ಬಂದಿ ಗಂಗರಾಜು ಮತ್ತು ಅಮುಲ್ ಅವರು ಬೇಡಿಕೆ ಇಟ್ಟಿದ್ದರು. ಹಂಸವೇಣಿ ಅವರು ಬುಧವಾರ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಬಂಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು