ಮೈಸೂರು/ಬೆಂಗಳೂರು: ‘ ಮಂಡ್ಯ ಜಿಲ್ಲೆಯ ಹಲಗೂರಿನಲ್ಲಿ ನೀರೆತ್ತುವ ಕಾರ್ಯಾಗಾರದ ದುರಸ್ತಿ ನಡೆದಿದೆ. ಬುಧವಾರ ಬೆಳಿಗ್ಗೆವರೆಗೆ 880 ಎಂ.ಎಲ್.ಡಿ. ಘಟಕ ಪ್ರಾರಂಭಿಸು ತ್ತೇವೆ. ಬೆಂಗಳೂರಿಗೆ ನೀರು ಪೂರೈಕೆ ವ್ಯವಸ್ಥೆ ಸರಿಯಾಗಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲಿ ಹೇಳಿದರು.

‘ಬೆಂಗಳೂರಿನಲ್ಲಿ ಮಳೆಯಿಂದ ಆಗಿರುವ ಅವಾಂತರಕ್ಕೆ ಕಾಂಗ್ರೆಸ್ ನವರ ಕಾಲದಲ್ಲಿನ ಅತಿಕ್ರಮಣ, ಅಕ್ರಮಗಳು ಕಾರಣ. ಕಾಂಗ್ರೆಸ್ನವರ ಕಾಲದಲ್ಲಿ ಏನೇನಾಗಿದೆ ಎನ್ನುವು ದನ್ನು ಮುಂದಿನ ಅಧಿವೇಶನದಲ್ಲಿ ಚರ್ಚಿಸಲು ಸಿದ್ಧವಿದ್ದೇವೆ’ ಎಂದರು. ಇಲ್ಲಿನ ಮಂಡಕಳ್ಳಿ ವಿಮಾನನಿಲ್ದಾ ಣ ದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಂಜೆ ಬೆಂಗಳೂರಿನಲ್ಲಿ ಸುದ್ದಿ ಗಾರರ ಜೊತೆಗೆ ಮಾತನಾಡಿದ ಅವರು, ಮಳೆಯಿಂದಾಗಿ ಮಹದೇವ ಪುರವಲಯದ ವ್ಯಾಪ್ತಿಯಲ್ಲಿ ಹೆಚ್ಚು ತೊಂದರೆಯಾಗಿದೆ. ಅಲ್ಲಿ 69 ಕೆರೆಗಳಿವೆ. ಎಲ್ಲ ಕೆರೆಗಳು ಭರ್ತಿ ಯಾಗಿವೆ ಎಂದು ಹೇಳಿದರು.

ನಗರದಲ್ಲಿ 90 ವರ್ಷಗಳಲ್ಲೇ ಅತ್ಯಧಿಕ ಮಳೆ ಬಿದ್ದಿದೆ. ಇನ್ನೂ ಕೆಲ ದಿನ ಮಳೆಯಾಗುವ ಮುನ್ಸೂ ಚನೆ ಇದೆ. ಕೆರೆಗಳು ತುಂಬಿ ಹರಿಯುತ್ತಿವೆ. ಕೆಲವು ಕೆರೆಗಳು ಒಡೆದಿವೆ. ಇದರಿಂದಾಗಿ ಹೆಚ್ಚಿನ ಸಮಸ್ಯೆಯಾಗಿದೆ. ಜನರ ಸ್ಥಳಾಂತರ ಮತ್ತು ಪರಿಹಾರ ಕಾರ್ಯಾಚರಣೆಗೆ ಅಧಿಕಾರಿಗಳು, ಸಿಬ್ಬಂದಿ ನಿರಂತರ ವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಯಾವುದೇ ಆರೋಪವಿದ್ದರೂ ತನಿಖೆ: ಪಿಎಸ್ಐ ನೇಮಕಾತಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಯೊಬ್ಬರು ಹುದ್ದೆ ಪಡೆಯಲು ಬಿಜೆಪಿ ಶಾಸಕ ಬಸವರಾಜ ದಢೇಸೂಗೂರ್ ಅವರಿಗೆ ₹ 15 ಲಕ್ಷ ನೀಡಿದ್ದರೆಂಬ ಆರೋಪ ಕುರಿತಂತೆ, ‘ಪ್ರಕರಣದ ತನಿಖೆ ನಡೆಯುತ್ತಿದೆ. ಯಾವುದೇ ಹೊಸ ಆರೋಪಗಳು ಬಂದರೂ ಆ ಬಗ್ಗೆ ತನಿಖೆ ನಡೆಯುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.