ಬೆಂಗಳೂರು: ನಗರ ವಿವಿಧ ಭಾಗಗಳಲ್ಲಿ ಬುಧವಾರ ರಾತ್ರಿ ಮೊಬೈಲ್ ಬಳಕೆದಾರರು ನೆಟ್ವರ್ಕ್ ಸಮಸ್ಯೆ ಅನುಭವಿಸಿದರು.

ಹಲವು ಮಂದಿ ಕರೆ, ಎಸ್ಎಂಎಸ್ ಮಾಡಲಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕರೆ ಮಾಡುವಾಗ ಅನಗತ್ಯ ಕಾಲರ್ಟೋನ್ ಕೇಳಿಸುತ್ತಿದೆ, ಕರೆ ಕನೆಕ್ಟ್ ಆಗುತ್ತಿಲ್ಲ, ಸರ್ವರ್ ಸಮಸ್ಯೆ ಎಂದು ತೋರಿಸುತ್ತಿರುವುದಾಗಿ ಕೆಲವರು ಹೇಳಿದ್ದಾರೆ.
.ಹಾಸನ: ಬಿಎಸ್ಎನ್ಎಲ್ ನೆಟ್ವರ್ಕ್ ‘ನಾಟ್ ರೀಚೆಬಲ್’.
ಏರ್ಟೆಲ್ ಸಿಮ್ ಬಳಕೆದಾರರಿಗೆ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಬೇರೆ ನೆಟ್ವರ್ಕ್ ಬಳಸುವವರು ಯಾವುದೇ ತೊಂದರೆ ಅನುಭವಿಸಿದ್ದರ ಬಗ್ಗೆ ವರದಿಯಾಗಿಲ್ಲ.

‘ನಮ್ಮ ಸೈಟ್ ಒಂದರಲ್ಲಿ ಮೂಲಸೌಕರ್ಯ ಸಂಬಂಧ ಸಮಸ್ಯೆ ಉದ್ಭವವಾಗಿತ್ತು. ಅದನ್ನು ಸರಿಪಡಿಸಲಾಗಿದೆ. ವ್ಯವಸ್ಥೆ ಹಳಿಗೆ ಮರಳಿದ್ದು, ಕರೆ ಮಾಡಲು ಸಾಧ್ಯವಾಗುತ್ತಿದೆ’ ಎಂದು ಏರ್ಟೆಲ್ನ ವಕ್ತಾರರೊಬ್ಬರು ತಿಳಿಸಿದರು.
.ಕೋಣಂದೂರು: ಬಿಎಸ್ಎನ್ಎಲ್ ಟವರ್ ಅಳವಡಿಸಿದರೂ ಇಲ್ಲ ನೆಟ್ವರ್ಕ್.
‘ಕೆಲವು ಪ್ರದೇಶಗಳಲ್ಲಿ ಹೆಚ್ಚು ಮರಗಳು ಇದ್ದರೆ ಅಥವಾ ಗಾಳಿ ಹೆಚ್ಚು ಇದ್ದಾಗ ಈ ಸಮಸ್ಯೆಗಳು ಉಂಟಾಗಬಹುದು’ ಎಂದು ಏರ್ಟೆಲ್ನ ಮತ್ತೊಬ್ಬ ಪ್ರತಿನಿಧಿ ಹೇಳಿದರು.

‘ಕೆಲವೊಮ್ಮೆ ಅಂತಹ ಸಂದರ್ಭಗಳಲ್ಲಿ ಸಿಗ್ನಲ್ ಬೂಸ್ಟರ್ಗಳು ಕಾರ್ಯನಿರ್ವಹಿಸದಿರಬಹುದು’ ಎಂದು ಅವರು ತಿಳಿಸಿದರು.
.ಪಡಿತರ ಚೀಟಿಗೆ ನೆಟ್ವರ್ಕ್ ಸಮಸ್ಯೆ: ಕರ್ನಾಟಕ ಒನ್ ಸೆಂಟರ್ ಮುಂದೆ ಜನರ ಸಾಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.