ಮಂಗಳವಾರ, ಜುಲೈ 14, 2020
28 °C

ಅಮೆರಿಕದಲ್ಲಿ ಕೆಲಸದ ಆಮಿಷವೊಡ್ಡಿ ₹ 10 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಮೆರಿಕದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ₹ 10 ಲಕ್ಷ ಪಡೆದು ವಂಚಿಸಿರುವ ಬಗ್ಗೆ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹಣ ಕಳೆದುಕೊಂಡಿರುವ ಗಿರಿಬಾಬು ಎಂಬುವರು ದೂರು ನೀಡಿದ್ದಾರೆ. ಆರೋಪಿ ಮುರಳಿ ಕೃಷ್ಣರೆಡ್ಡಿ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದರು.

‘ಕಟ್ಟಡ ನಿರ್ಮಾಣ ಮೇಲ್ವಿಚಾರಕ ಆಗಿರುವ ಗಿರಿಬಾಬು ಅವರಿಗೆ 2018ರಲ್ಲಿ ಆರೋಪಿ ಪರಿಚಯವಾಗಿತ್ತು. ಅಮೆರಿಕದಲ್ಲಿ ಸಂಬಂಧಿಕರು ಇರುವುದಾಗಿ ಹೇಳಿದ್ದ ಆರೋಪಿ, ಅವರ ಮೂಲಕ ಕೆಲಸ ಕೊಡಿಸುವುದಾಗಿ ತಿಳಿಸಿದ್ದರು. ಪಾಸ್‌ಪೋರ್ಟ್, ವೀಸಾ ಖರ್ಚು ಹಾಗೂ ಕಮಿಷನ್ ಎಂದು ಹೇಳಿ ₹ 10 ಲಕ್ಷ ಪಡೆದುಕೊಂಡಿದ್ದರು.’

‘ಇದುವರೆಗೂ ಆರೋಪಿ ಕೆಲಸ ಕೊಡಿಸಿಲ್ಲ. ಹಣ ವಾಪಸು ಕೇಳಿದರೆ ಜೀವ ಬೆದರಿಕೆ ಹಾಕುತ್ತಿರುವುದಾಗಿ ಗಿರಿಬಾಬು ದೂರಿನಲ್ಲಿ ಆರೋಪಿಸಿದ್ದಾರೆ’ ಎಂದೂ ಪೊಲೀಸರು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು