ಗುರುವಾರ , ಅಕ್ಟೋಬರ್ 21, 2021
29 °C

ಬೆಂಗಳೂರಿನಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಮತ್ತೊಂದು ಬಹುಮಹಡಿ ಕಟ್ಟಡ ಮಂಗಳವಾರ ಬೆಳಿಗ್ಗೆ ಕುಸಿದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಡೇರಿ ವೃತ್ತದಲ್ಲಿರುವ‌‌ ಕೆಎಂಎಫ್ ಆವರಣದಲ್ಲಿರುವ‌ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ಈ ಕಟ್ಟಡ, ನೌಕರರ ಕ್ವಾರ್ಟರ್ಸ್ ಆಗಿತ್ತು.  ಶಿಥಿಲವಾಗಿದ್ದರಿಂದ ಹಲವು ತಿಂಗಳ ಹಿಂದೆಯೇ ಎಲ್ಲರನ್ನೂ ಕಟ್ಟಡದಿಂದ ಖಾಲಿ‌ ಮಾಡಿಸಲಾಗಿತ್ತು. ಕಟ್ಟಡದಲ್ಲಿ ‌ಯಾರೂ‌
ವಾಸವಿರಲಿಲ್ಲ. ಮಂಗಳವಾರ ನಿಧಾನವಾಗಿ ವಾಲಿದ ಕಟ್ಟಡ, ಕುಸಿದು ಬಿದ್ದಿದೆ.

ಓದಿ: 

ಸ್ಥಳಕ್ಕೆ ‌ಪೊಲೀಸರು ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಕೆಎಂಎಫ್ ಅಧಿಕಾರಿಗಳೂ ಸ್ಥಳದಲ್ಲಿದ್ದಾರೆ. ಕಟ್ಟಡದ ಅವಶೇಷಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಲಕ್ಕಸಂದ್ರದಲ್ಲಿ ಸೋಮವಾರವಷ್ಟೇ ಮೂರು ಅಂತಸ್ತಿನ ಕಟ್ಟಡ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ.

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು