ಕೆ.ಆರ್.ಪುರ: ಮಹದೇವಪುರ ಬಿಜೆಪಿ ಘಟಕದ ಸಹಯೋಗದಲ್ಲಿ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ ದೊಡ್ಡಬನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಅರವಿಂದ ಲಿಂಬಾವಳಿ ಟಿ.10 ಆರ್.ಡಬ್ಲ್ಯು.ಎ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಲಾಯಿತು.

ಪುರುಷರ ವಿಭಾಗದಲ್ಲಿ ಆಲ್ಫಾ ಗಾರ್ಡನ್ ಸ್ಟ್ರೀಟ್ ಸ್ಪಾರ್ಟನ್ಸ್ ಅಪಾರ್ಟ್ಮೆಂಟ್ ವಿಜೇತ ತಂಡ ಮೊದಲ ಬಹುಮಾನವಾಗಿ ಟ್ರೋಫಿ ಪಡೆದರೆ, ಸಿ.ಪಿ ಶ್ಮಷರ್ಸ್ ತಂಡ ರನ್ನರ್ ಅಫ್ ಟ್ರೋಫಿ ಸ್ವೀಕರಿಸಿತು.

ಮಹಿಳೆಯರ ವಿಭಾಗದಲ್ಲಿ ಪ್ರೆಸ್ಟೀಜ್ ಟೈಟಾನ್ಸ್ ಮೊದಲ ವಿಜೇತ ತಂಡವಾಗಿ ಹೊರಹೊಮ್ಮಿ ಟ್ರೋಫಿ ಪಡೆದರೆ, ರನ್ನರ್ ಅಪ್ ಆಗಿ ಟ್ರಾನ್ಕ್ವಲಿಟಿ ಟೈಟನ್ಸ್ ತಂಡ ಟ್ರೋಫಿ ತನ್ನದಾಗಿಸಿಕೊಂಡಿತು.

ಆರ್.ಡಬ್ಲ್ಯು.ಎ ಪ್ರಧಾನ ಕಾರ್ಯದರ್ಶಿ ರಾಜೇಶ್ ರೆಡ್ಡಿ ಮಾತನಾಡಿ, ‘ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಹದೇವಪುರ ಕ್ಷೇತ್ರದ 10 ವಾರ್ಡ್ಗಳಿಂದ 100 ಪುರುಷರ ಹಾಗೂ 10 ಮಹಿಳೆಯರ ತಂಡಗಳು ಭಾಗವಹಿಸಿದ್ದವು. ಫೆ.1ರಂದು ಆರಂಭಗೊಂಡು ಫೆ.22 ರವರೆಗೆ ಪಂದ್ಯಾವಳಿ ನಡೆಯಿತು’ ಎಂದರು.

ರೆಸಿಡೆಂಟ್ ಅಸೋಸಿಯೇಷನ್ ಉಸ್ತುವಾರಿ ಪಾಪಣ್ಣ, ಅಧ್ಯಕ್ಷ ಮಂಜುನಾಥ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹೆಚ್.ಎಸ್.ಪಿಳ್ಳಪ್ಪ, ಪ್ರದಾನ ಕಾರ್ಯದರ್ಶಿ ರಾಜೇಶ್ ರೆಡ್ಡಿ, ಮುಖಂಡರಾದ ಜ್ಯೋತಿಪುರವೇಣು, ಲೋಕೇಶ್, ಅನಿಲ್ ಗೌಡ, ಕೆ.ವಿ.ನಾಗರಾಜ್, ಸೋಮಶೇಖರ್, ಮಂಜುನಾಥ್ ದುಗಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.