ಬೆಂಗಳೂರು: ಸೇನೆಯ ಗ್ರೂಪ್ ‘ಸಿ’ ನೇಮಕಾತಿಗೆ ಫೆಬ್ರುವರಿ 8ರಂದು ನಡೆದ ಪರೀಕ್ಷೆ ವೇಳೆ ನಕಲು ಹಾಗೂ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಮೇಲೆ 18 ಅಭ್ಯರ್ಥಿಗಳನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

515 ಆರ್ಮಿ ಬೇಸ್ ವರ್ಕ್ಶಾಪ್ನ ಕಮಾಂಡಂಟ್ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಭದ್ರತಾ ಅಧಿಕಾರಿ, ಕರ್ನಲ್ ಎಸ್.ಎಸ್. ಜ್ಯೋತಿರ್ಲಿಂಗಮ್ ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸುರೇಂದರ್, ಸಂದೀಪ್, ಮೊಂಟಿ, ಅಜಯ್ ಕುಮಾರ್, ಅನುಜ್, ರಾಹುಲ್, ಸುಮಿತ್, ಅಮನ್, ಅಂಕಿತ್, ಯೋಗೇಶ್, ವಿಕಾಸ್, ಅಂಕಿತ್ ಬಿನ್ ದಲ್ಬೀರ್, ಅಮನ್ ರೇದು, ರಜತ್, ವಿನಯ್ , ಅಂಕಿತ್ ಬಿನ್ ರಾಜೇಂದರ್, ಅಮನ್ ಕುಮಾರ್, ಮನಿಶ್ ಎಂಬುವವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಫೆಬ್ರುವರಿ 8ರಂದು 515 ಆರ್ಮಿ ಬೇಸ್ ವರ್ಕ್ಶಾಪ್ ವತಿಯಿಂದ ಸಿವಿಲ್ ಡಿಫೆನ್ಸ್ ಎಂಪ್ಲಾಯಿ ರೆಕ್ರ್ಯೂಟ್ಮೆಂಟ್ನ ಗ್ರೂಪ್ ‘ಸಿ’ ಲೋಯರ್ ಡಿವಿಷನ್ ಕ್ಲರ್ಕ್ ಹುದ್ದೆಯ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಯಿತು. ಈ ವೇಳೆ ಪರೀಕ್ಷೆ ಬರೆಯುವ ವೇಳೆ 18 ಅಭ್ಯರ್ಥಿಗಳು ಡಿಜಿಟಲ್ ಸಾಧನಗಳನ್ನು ಬಳಸಿ, ಸಿಕ್ಕಿಬಿದಿದ್ದಾರೆ ಎಂದು ಜ್ಯೋತಿರ್ಲಿಂಗಮ್ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೇ ಪರೀಕ್ಷಾ ಆವರಣದಲ್ಲೂ ಎಲೆಕ್ಟ್ರಾನಿಕ್ ಸಾಧನಗಳು ಸಿಕ್ಕಿವೆ. ಈ ಪೈಕಿ ಅಮನ್ ಮತ್ತು ರಾಜೇಂದರ್ ಅವರು ಪರೀಕ್ಷಾ ಕೊಠಡಿಯ ಹೊರೆಗೆ ಇರಿಸಿದ್ದ ಬ್ಯಾಗ್ಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾಗಿವೆ. ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

‘ಕರ್ನಲ್ ಜ್ಯೋತಿರ್ಲಿಂಗಮ್ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡು, 18 ಮಂದಿಯನ್ನು ಬಂಧಿಸಿ, ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಭ್ಯರ್ಥಿಗಳ ವಿಚಾರಣೆ ನಡೆಯುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.