ಮಂಗಳವಾರ, ಸೆಪ್ಟೆಂಬರ್ 28, 2021
22 °C

ನಾಲ್ವರು ಹಿರಿಯರಿಗೆ ಆಶ್ವಾಸನ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಹಾನಗರದಲ್ಲಿ ಹಿರಿಯ ನಾಗರಿಕರ ಹಿತರಕ್ಷಣೆಗಾಗಿ ಸ್ಥಾಪಿತವಾಗಿರುವ ‘ಆಶ್ವಾಸನ’ ಸಂಸ್ಥೆಯು ನಾಲ್ವರು ಹಿರಿಯ ಮಹನೀಯರಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದೆ. 

ಸುಗಮ ಸಂಗೀತ ಕ್ಷೇತ್ರದಲ್ಲಿ ಏಳು ದಶಕಗಳ ಕಾಲ ಸೇವೆ ಸಲ್ಲಿಸಿರುವ ಹೊ.ನಾ. ರಾಘವೇಂದ್ರ ಗರ್ತಿಕೆರೆ (ಗರ್ತಿಕೆರೆ ರಾಘಣ್ಣ), ಹಿಂದೂಸ್ತಾನಿ ಗಾಯಕ ಶಿವಮೊಗ್ಗದ ಎಸ್.ಎಲ್. ವೇಣುಗೋಪಾಲ, ಯಕ್ಷಗಾನ ವೇಷಧಾರಿ ಗೋಕರ್ಣದ ಅನಂತ ಹಾವಗೋಡಿ, ಇಡಗುಂಜಿಯ ರಥ ಶಿಲ್ಪಿ ಗಂಗಾಧರ ಆಚಾರ್ಯ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

 ‘2006ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಅಕ್ಟೋಬರ್‌ನಲ್ಲಿ ಹಿರಿಯರ ದಿನದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಫಲಕ ಮತ್ತು ₹15 ಸಾವಿರ ನಗದು ಬಹುಮಾನ ನೀಡಿ ಮಹನೀಯರನ್ನು ಗೌರವಿಸಲಾಗುವುದು’ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಜಿ.ಎಸ್. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು