ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ತಲೆಯಲ್ಲಿದ್ದ ಗುಂಡನ್ನು ಕಿವಿಯ ಮೂಲಕ ಹೊರ ತೆಗೆದ ವೈದ್ಯರು

Published 12 ಡಿಸೆಂಬರ್ 2023, 15:41 IST
Last Updated 12 ಡಿಸೆಂಬರ್ 2023, 15:41 IST
ಅಕ್ಷರ ಗಾತ್ರ

ಬೆಂಗಳೂರು: ಯೆಮನ್‌ ದೇಶದ 29 ವರ್ಷದ ವ್ಯಕ್ತಿಯ ತಲೆಯಲ್ಲಿದ್ದ 3 ಸೆಂ.ಮೀ ಉದ್ದದ ಗುಂಡನ್ನು (ಬುಲೆಟ್‌) ಕಿವಿಯ ಮೂಲಕ ಹೊರತೆಗೆಯುವಲ್ಲಿ ಜೆ.ಪಿ. ನಗರದ ಆಸ್ಟರ್ ಆರ್‌ವಿ ಆಸ್ಪತ್ರೆಯ ಇಎನ್‌ಟಿ ಶಸ್ತ್ರಚಿಕಿತ್ಸಕರು ಯಶಸ್ವಿಯಾಗಿದ್ದಾರೆ. 

ಯೆಮನ್‌ನಲ್ಲಿ ನಡೆದ ಸಂಘರ್ಷವೊಂದರಲ್ಲಿ ವ್ಯಕ್ತಿಯ ತಲೆಗೆ ಗುಂಡು ತಗುಲಿತ್ತು. ಈ ಗುಂಡು 18 ವರ್ಷಗಳಿಂದ ವ್ಯಕ್ತಿಯ ತಲೆಯಲ್ಲಿತ್ತು. ಇದರಿಂದಾಗಿ ಅವರು ಯಾತನೆ ಅನುಭವಿಸುತ್ತಿದ್ದರು. ಗಾಯದ ಪರಿಣಾಮ ಶಾಶ್ವತ ಕಿವುಡುತನಕ್ಕೂ ಒಳಗಾಗಿದ್ದರು. ಸೂಕ್ತ ಚಿಕಿತ್ಸೆಗಾಗಿ ಅಲೆದಾಡಿದ ಅವರು, ಅಂತಿಮವಾಗಿ ಇಲ್ಲಿಗೆ ಬಂದರು. ಡಾ. ರೋಹಿತ್ ಉದಯ ಪ್ರಸಾದ್ ಹಾಗೂ ಡಾ. ವಿನಾಯಕ್‌ ಕುರ್ಲೆ ನೇತೃತ್ವದ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ ಎಂದು ಆಸ್ಪತ್ರೆ ತಿಳಿಸಿದೆ. 

‘ಇಬ್ಬರು ಮಕ್ಕಳ ತಂದೆಯಾಗಿರುವ ವ್ಯಕ್ತಿ, ಯೆಮನ್‌ನಲ್ಲಿ ವ್ಯಾಪಾರ ನಡೆಸುತ್ತಿದ್ದರು. ನಿರಂತರ ಕಿವಿ ಸೋರುವಿಕೆ ಮತ್ತು ದೀರ್ಘಕಾಲದ ತಲೆನೋವಿಗೆ ಶಾಶ್ವತ ಪರಿಹಾರ ಪಡೆಯಲು ಅವರು ನಮ್ಮ ಆಸ್ಪತ್ರೆಗೆ ಬಂದರು. ಮೂಳೆಯಲ್ಲಿ ಗುಂಡು ಆಳವಾಗಿ ತಳವೂರಿತ್ತು. ಇದು ಶಸ್ತ್ರಚಿಕಿತ್ಸೆಯನ್ನು ಸವಾಲಾಗಿಸಿತು. ಗುಂಡು ಮತ್ತು ನಾಳೀಯ ರಚನೆಗಳಿಗೆ ಸಾಮೀಪ್ಯ ಗುರುತಿಸಲು ಸಿ.ಟಿ ಆಂಜಿಯೋಗ್ರಫಿ ಮಾಡಲಾಯಿತು. ಎಕ್ಸ್-ರೇ ಸಹ ನಡೆಸಿ, ಎಚ್ಚರಿಕೆಯಿಂದ ಶಸ್ತ್ರಚಿಕಿತ್ಸೆ ನಡೆಸಿದವು’ ಎಂದು  ಡಾ. ರೋಹಿತ್ ಉದಯ ಪ್ರಸಾದ್ ಹೇಳಿದರು. 

‘ಶಸ್ತ್ರಚಿಕಿತ್ಸೆಯ ನಂತರ ವ್ಯಕ್ತಿಯು ತೀವ್ರತರ ತಲೆನೋವಿನಿಂದ ಮುಕ್ತಿ ಹೊಂದಿದರು. ಅವರ ಆರೋಗ್ಯದಲ್ಲಿ ಗಮನಾರ್ಹವಾದ ಸುಧಾರಣೆ ಕಂಡುಬಂದಿತು. ವ್ಯಕ್ತಿ ಈಗ ಚೇತರಿಸಿಕೊಂಡು ತಮ್ಮ ದೇಶಕ್ಕೆ ಮರಳಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT