ಶುಕ್ರವಾರ, ಮಾರ್ಚ್ 31, 2023
33 °C

ಅತ್ಯಾಚಾರಕ್ಕೆ ಯತ್ನ; ಯುವತಿ ಮಲಗಿರುವಾಗ ಸೆಲ್ಫಿ ಕ್ಲಿಕ್ಕಿಸಿದ್ದ ಚಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಹೋಟೆಲ್ ಉದ್ಯೋಗಿಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ ಉಬರ್ ಚಾಲಕ ದೇವರಾಜಲು ಎಂಬಾತನನ್ನು ಜೀವನ್‌ಬಿಮಾ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಸಂತ್ರಸ್ತ ಯುವತಿ ಜೊತೆ ಕ್ಲಿಕ್ಕಿಸಿದ್ದ ಸೆಲ್ಫಿ ಫೋಟೊಗಳು ಆತನ ಮೊಬೈಲ್‌ನಲ್ಲಿ ಪತ್ತೆಯಾಗಿವೆ.

‘ಮುರುಗೇಶಪಾಳ್ಯದಲ್ಲಿ ವಾಸವಿದ್ದ ಯುವತಿ, ಸ್ನೇಹಿತರ ಮನೆಗೆ ಬುಧವಾರ ಹೋಗಿದ್ದರು. ರಾತ್ರಿ ಅಲ್ಲಿಂದ ವಾಪಸು ಬರಲು ಕ್ಯಾಬ್ ಕಾಯ್ದಿರಿಸಿದ್ದರು. ಸ್ಥಳಕ್ಕೆ ಬಂದಿದ್ದ ಆರೋಪಿ ದೇವರಾಜಲು, ಯುವತಿಯನ್ನು ಹತ್ತಿಸಿಕೊಂಡು ಮುರುಗೇಶಪಾಳ್ಯಕ್ಕೆ ಬಂದಿದ್ದ. ಕ್ಯಾಬ್‌ನಲ್ಲಿದ್ದ ಯುವತಿ ನಿದ್ದೆಗೆ ಜಾರಿದ್ದಳು. ನಿಗದಿತ ಸ್ಥಳ ಬಂದರೂ ಎಚ್ಚರವಾಗಿರಲಿಲ್ಲ. ಅದೇ ಸಂದರ್ಭದಲ್ಲಿ ಯುವತಿ ಜೊತೆ ಆರೋಪಿ ಸೆಲ್ಫಿ ಫೋಟೊ ಕ್ಲಿಕ್ಕಿಸಿಕೊಂಡಿದ್ದ. ನಂತರ ಯುವತಿ ಮೇಲೆ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಎಚ್ಚರಗೊಂಡಿದ್ದ ಯುವತಿ, ಕಿರುಚಾಡಿದ್ದರು. ಆತನಿಂದ ತಪ್ಪಿಸಿಕೊಂಡು ಕ್ಯಾಬ್‌ನಿಂದ ಹೊರಗೆ ಬಂದಿದ್ದರು.’

‘ಹೆದರಿದ ಆರೋಪಿ, ಅಲ್ಲಿಂದ ಪರಾರಿಯಾಗಿದ್ದ. ಈ ಬಗ್ಗೆ ತುರ್ತು ಸಂಖ್ಯೆ 112ಕ್ಕೆ ಕರೆ ಮಾಡಿ ಅಳಲು ತೋಡಿಕೊಂಡಿದ್ದರು.’ ಎಂದೂ ಮೂಲಗಳು ತಿಳಿಸಿವೆ.

‘ಉಬರ್ ಕಂಪನಿ ಸಂಪರ್ಕಿಸಿ, ಆರೋಪಿ ಬಗ್ಗೆ ಮಾಹಿತಿ ಕಲೆಹಾಕಲಾಯಿತು. ಬೆಂಗಳೂರು ಹೊರವಲಯದಲ್ಲಿ ಆರೋಪಿಯನ್ನು ಬಂಧಿಸಲಾಯಿತು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು