ಶನಿವಾರ, ಏಪ್ರಿಲ್ 1, 2023
29 °C
ಪರಿಷ್ಕೃತ ಪಟ್ಟಿ ಪ್ರಕಟಿಸಿದ ಪ್ರಾಧಿಕಾರ

ಆಟೊ ಪ್ರಯಾಣ ದರ ₹ 5 ಹೆಚ್ಚಳ: ಡಿಸೆಂಬರ್ 1ರಿಂದ ಹೊಸ ದರ ಅನ್ವಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಆಟೊ ಪ್ರಯಾಣ ದರವನ್ನು ಹಾಲಿ ದರಕ್ಕಿಂತ ₹ 5 ಹೆಚ್ಚಳ ಮಾಡಲಾಗಿದ್ದು, ಈ ಸಂಬಂಧ ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.

ಸದ್ಯ 1.9 ಕಿ.ಮೀ ಸಂಚಾರಕ್ಕೆ ₹ 25 ದರವಿತ್ತು. ಇದೀಗ 2 ಕಿ.ಮೀ ಸಂಚಾರಕ್ಕೆ ₹ 30 ನಿಗದಿ ಮಾಡಲಾಗಿದೆ. ಡಿಸೆಂಬರ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.

‘ಹೊಸ ವಾಹನದ ಮುಖ ಬೆಲೆ, ಸಾರಿಗೆ ಇಲಾಖೆ ಶುಲ್ಕಗಳು, ಇಂಧನ ಹಾಗೂ ಎಲ್‌ಪಿಜಿ ಗ್ಯಾಸ್ ದರ ಏರಿಕೆ ಆಗಿದೆ. ಲಾಕ್‌ಡೌನ್‌ನಿಂದ ಆಟೊ ಚಾಲಕ ಜೀವನ ನಿರ್ವಹಣೆಗೆ ತೊಂದರೆ ಆಗಿದೆ. ಮಂಗಳೂರು ಹಾಗೂ ಉಡುಪಿ ನಗರಗಳಲ್ಲಿ ಈಗಾಗಲೇ ದರ ಹೆಚ್ಚಳ ಮಾಡಲಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಹಾಗೂ ಆಟೊ ಚಾಲಕರ ಸಂಘಗಳ ಮನವಿ ಪರಿಶೀಲಿಸಿ, ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

‘ ನಿಗದಿತ ಪರಿಷ್ಕೃತ ದರ ಪಟ್ಟಿಯನ್ನು ಚಾಲಕರು ತಮ್ಮ ಆಟೊದಲ್ಲಿ ಪ್ರದರ್ಶಿಸಬೇಕು. ಪರಿಷ್ಕೃತ ದರಗಳಿಗೆ ತಕ್ಕಂತೆ ಮೀಟರ್‌ಗಳ ಅಂಕಿಗಳನ್ನು ಮಾರ್ಪಡಿಸಿ 2022ರ ಫೆಬ್ರವರಿ 28ರೊಳಗೆ (90 ದಿನಗಳು) ಪುನಃ ಸತ್ಯಾಪನೆ ಮಾಡಿಸಿ ಮುದ್ರೆ ಹಾಕಿಸಿಕೊಳ್ಳಬೇಕು’ ಎಂದೂ ಹೇಳಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು