ಮೂರು ಪ್ರತ್ಯೇಕ ‘ಭಾರತೀಯ ಪೇಟೆಂಟ್’ ಪಡೆಯಲು ಈ ವಿಧಾನ ಗಳನ್ನು ಸಲ್ಲಿಸಲಾಗಿದೆ. ಈ ಸಂಶೋಧನಾ ಯೋಜನೆಗೆ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋ ಧನಾ ಮಂಡಳಿ (ಪ್ರೊಮೊಟಿಂಗ್ ಆಪರ್‌ಚ್ಯುನಿಟೀಸ್ ಫಾರ್ ವುಮೆನ್ ಇನ್ ಎಕ್ಸ್‌ಪ್ಲೋಟರಿ ರಿಸರ್ಜ್– ಎಸ್‌ಇಆರ್‌ಬಿ– ಪಿಒಡಬ್ಲ್ಯುಆರ್) ಮೂಲಕ ಭಾರತ ಸರ್ಕಾರ ಹಣ ಒದಗಿಸಿದೆ.
‘ದವಡೆಗಳಲ್ಲಿ ಸೃಷ್ಟಿಯಾಗುವ ಗುಳ್ಳೆಗಳನ್ನು(ಸಿಸ್ಟ್) ಮೊದಲೇ ತಪಾಸಣೆ ಮಾಡುವುದರಿಂದ, ಚಿಕಿತ್ಸೆಯ ವಿಧಾನ ಆಯ್ಕೆ ಮಾಡಿಕೊಳ್ಳಲು ದಂತ ವೈದ್ಯರಿಗೆ ಅನುಕೂಲವಾಗುತ್ತದೆ. ಹಲವು ರೀತಿಯ ಮಾದರಿಗಳನ್ನು ಅಧ್ಯಯನ ಮಾಡಿದ ನಂತರ, ಶಸ್ತ್ರಚಿಕಿತ್ಸೆಯ ನಂತರವೂ ಗುಳ್ಳೆಗಳು ಮತ್ತೆ ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂಬುದನ್ನು ಕಂಡುಕೊಂಡಿದ್ದೇವೆ. ತಂತ್ರಜ್ಞಾನದ ವಿಧಾನಗಳಿಂದ ವ್ಯಕ್ತಿಗನುಗುಣವಾದ ಚಿಕಿತ್ಸೆ ಯನ್ನು ನಿರ್ಧರಿಸಬಹುದಾಗಿದೆ’ ಎಂದು ಎಂ.ಎಸ್. ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್‌ನ ಮೌಖಿಕ ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ರೂಪಾ ಎಸ್. ರಾವ್ ಮತ್ತು ಕಂಪ್ಯೂಟರ್ ಸೈನ್ಸ್– ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ದಿವ್ಯಾ ಬಿ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.