ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಟ್‌ ಆಫ್‌ ಲಿವಿಂಗ್‌ನಿಂದ ‘ಶ್ರೀ ಶ್ರೀ ಶಿಕ್ಷಣ ಪ್ರಶಸ್ತಿ’ ಪ್ರದಾನ

Published 27 ಜನವರಿ 2024, 15:31 IST
Last Updated 27 ಜನವರಿ 2024, 15:31 IST
ಅಕ್ಷರ ಗಾತ್ರ

ಬೆಂಗಳೂರು: ಪಠ್ಯಕ್ಕೆ ಸೀಮಿತಗೊಳ್ಳದೇ ನೈಜ ಶಿಕ್ಷಣ ನೀಡುತ್ತಿರುವ ದೇಶದ ವಿವಿಧ ರಾಜ್ಯಗಳ ಅತ್ಯುತ್ತಮ ಶಿಕ್ಷಕರನ್ನು ‘ಶ್ರೀ ಶ್ರೀ ಶಿಕ್ಷಣ ಪ್ರಶಸ್ತಿ’ ಮೂಲಕ ಗುರುತಿಸಲಾಗಿದೆ ಎಂದು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ತಿಳಿಸಿದರು.

ಆರ್ಟ್‌ ಆಫ್‌ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಶನಿವಾರ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ ಟ್ರಸ್ಟ್ ಹಮ್ಮಿಕೊಂಡಿದ್ದ ‘ಶ್ರೀ ಶ್ರೀ ಶಿಕ್ಷಣ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆಲಸವೇ ಧ್ಯೇಯ ಎಂಬ ನಂಬಿಕೆಯಿಂದ ನಮ್ಮ ಟ್ರಸ್ಟಿಗಳು ಕೆಲಸ ಮಾಡುತ್ತಾರೆ. ದೇಶದ ಎಲ್ಲ ಶಾಲೆಗಳು ನಮ್ಮವೇ ಆಗಿದ್ದು, ಅವುಗಳ ಅಭಿವೃದ್ಧಿ ಮತ್ತು ಉತ್ಕೃಷ್ಟತೆಗಾಗಿ ಶ್ರಮಿಸುತ್ತೇವೆ’ ಎಂದು ಹೇಳಿದರು.

‌ಕೇಂದ್ರ ಶಿಕ್ಷಣ ಸಚಿವ ಸುಭಾಷ್ ಸರ್ಕಾರ್‌ ಮಾತನಾಡಿ, ‘ನಮ್ಮ ನಾಗರಿಕತೆಯು ನೀಡಿರುವ ಎಲ್ಲ ಕೊಡುಗೆಗಳ ಬಗ್ಗೆ ಗೌರವ ಇಟ್ಟುಕೊಳ್ಳಬೇಕು. ಪ್ರಾಚೀನ ವಿಜ್ಞಾನವಾದ ಯೋಗವನ್ನೂ ಹೆಮ್ಮೆಯ ಭಾವದಿಂದ ನೋಡಬೇಕು’ ಎಂದು ಸಲಹೆ ನೀಡಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ‘ಆರ್ಟ್‌ ಆಫ್ ಲಿವಿಂಗ್‌ ಸಮಗ್ರ ಶಿಕ್ಷಣವನ್ನು ಭಾರತದಾದ್ಯಂತ ನೀಡುತ್ತಿದ್ದು, 1200 ಉಚಿತ ಶಾಲೆಗಳನ್ನು ನಡೆಸುತ್ತಿದೆ. ಒಂದು ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು ಉಚಿತವಾಗಿ ಶಿಕ್ಷಣ ಪಡೆಯುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ತುಮಕೂರಿನ ಸರ್ಕಾರಿ ಸಂಯೋಜಿತ ಪ್ರೌಢಶಾಲೆಯ ಪ್ರಾಂಶುಪಾಲ ಎಸ್. ಕೃಷ್ಣಪ್ಪ, ಮಹಾರಾಷ್ಟ್ರದ ದತ್ತಾತ್ರೇಯ ವಾರೆ, ಗುರುಗ್ರಾಮದ ರಷ್ಮಿ ಶ್ರೀವಾಸ್ತವ್ ಸಹಿತ ಅನೇಕ ಸಾಧಕರಿಗೆ, ವಿವಿಧ ಶೈಕ್ಷಣಿಕ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT