ಭಾನುವಾರ, ಜನವರಿ 26, 2020
20 °C
ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರತಿಭಟನೆ

ಐಐಎಸ್ಸಿಯಲ್ಲಿ ಆಜಾದಿ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ನೂರಾರು ವಿದ್ಯಾರ್ಥಿಗಳು ಆಜಾದಿ ಘೋಷಣೆ ಕೂಗಿದ್ದು, ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕ್ಯಾಂಪಸ್‌ನಲ್ಲಿರುವ ಆಡಳಿತ ಮಂಡಳಿ ಕಚೇರಿ ಎದುರು ಸೇರಿದ್ದ ವಿದ್ಯಾರ್ಥಿಗಳು, ಕಾಯ್ದೆ ಹಾಗೂ ಕೇಂದ್ರ ಸರ್ಕಾರದ ವಿರುದ್ಧದ ಘೋಷಣಾ ಫಲಕಗಳನ್ನು ಪ್ರದರ್ಶಿಸಿದ್ದಾರೆ. ವಿದ್ಯಾರ್ಥಿನಿಯೊಬ್ಬರು ಹಾಡಿನ ರೂಪದಲ್ಲಿ ಆಜಾದಿ ಘೋಷಣೆ ಕೂಗಿದ್ದು, ಅದಕ್ಕೆ ಉಳಿದವರೆಲ್ಲರೂ ಸಾಥ್ ನೀಡಿದ್ದಾರೆ. 

‘ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿಸಲಾಗಿದೆ. ಇದರ ವಿರುದ್ಧ ವಿದ್ಯಾರ್ಥಿ ಸಮೂಹವೇ ಹೋರಾಟಕ್ಕೆ ಇಳಿಯಲಿದೆ. ನಮ್ಮ ಈ ಆಜಾದಿ ಘೋಷಣೆ ಆರಂಭವಷ್ಟೇ’ ಎಂದು ಪ್ರತಿಭಟನಾನಿರತರು ಹೇಳಿದರು.

‘ದೇಶದ ಯುವ ವಿಜ್ಞಾನಿಗಳಾಗಿರುವ ನಾವೇ ಆಜಾದಿಗಾಗಿ ಘೋಷಣೆ ಕೂಗುತ್ತಿದ್ದೇವೆ. ದೇಶದ ಉಳಿದ ಪ್ರಜೆಗಳ ಪರಿಸ್ಥಿತಿ ಹೇಗಿರಬಾರದು’ ಎಂದು ಪ್ರಶ್ನಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು