ಮಂಗಳವಾರ, ಸೆಪ್ಟೆಂಬರ್ 21, 2021
23 °C

ಬೆಂಗಳೂರು: ಅಧಿಕಾರ ವಹಿಸಿಕೊಂಡ ನೂತನ ಡಿಸಿಪಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಐವರು ಡಿಸಿಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಸೋಮವಾರವಷ್ಟೇ ಆದೇಶ ಹೊರಡಿಸಿದ್ದು, ನೂತನ ಡಿಸಿಪಿಗಳು ಮಂಗಳವಾರ ಅಧಿಕಾರ ವಹಿಸಿಕೊಂಡರು.

ಪಶ್ಚಿಮ ವಿಭಾಗದ ಡಿಸಿಪಿ ಆಗಿ ಸಂಜೀವ ಪಾಟೀಲ, ಕೇಂದ್ರ ವಿಭಾಗದ ಡಿಸಿಪಿ ಆಗಿ ಎಂ.ಎನ್.ಅನುಚೇತ್, ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಆಗಿ ಡಿ. ದೇವರಾಜ್, ಉತ್ತರ ವಿಭಾಗದ ಡಿಸಿಪಿ ಆಗಿ ಧರ್ಮೇಂದ್ರಕುಮಾರ್ ಮೀನಾ ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಆಗಿ ಹರೀಶ್ ಪಾಂಡೆ ಅಧಿಕಾರ ಸ್ವೀಕರಿಸಿದರು.

ತಮ್ಮ ವಿಭಾಗದ ಕಚೇರಿಗೆ ಆಗಮಿಸಿದ ನೂತನ ಡಿಸಿಪಿಗಳು, ನಿರ್ಗಮಿತ ಡಿಸಿಪಿಗಳಿಂದ ಬ್ಯಾಟನ್ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು